ಕರ್ನಾಟಕ

karnataka

ETV Bharat / city

'ಕೈ'​ಕೊಡಲಿದ್ದಾರೆ ಪಾಲಿಕೆ ಸದಸ್ಯರು: ಇಂದು ಕಮಲ ಮುಡಿಯುವ ಸಾಧ್ಯತೆ? - ಪಕ್ಷಾಂತರ ಪರ್ವ

ಕಾಂಗ್ರೆಸ್‌ನಿಂದ ಪಾಲಿಕೆ ಸದಸ್ಯರ ದೊಡ್ಡ ತಂಡವೊಂದು ಇಂದು ಕಮಲಕ್ಕೆ ಜಿಗಿಯುವ ಸಾಧ್ಯತೆ ಹೆಚ್ಚಾಗಿದೆ.

Congress corporate-rs join to bjp

By

Published : Nov 23, 2019, 8:38 AM IST

ಬೆಂಗಳೂರು:ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಸಮೀಪಿಸುತ್ತಿದ್ದು, ಕಾಂಗ್ರೆಸ್‌ನಿಂದ ಪಾಲಿಕೆ ಸದಸ್ಯರ ದೊಡ್ಡ ತಂಡವೊಂದು ಕಮಲ ಪಕ್ಷಕ್ಕೆ ಜಿಗಿಯುವ ಸಾಧ್ಯತೆ ಹೆಚ್ಚಾಗಿದೆ.

ಶಿವಾಜಿನಗರ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಶುರುವಾಗಿದ್ದು, ಅನರ್ಹ ಶಾಸಕ ರೋಷನ್ ಬೇಗ್ ನಾಯಕತ್ವದಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಪಾಲಿಕೆ ಸದಸ್ಯರು ಬಹಿರಂಗವಾಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಕಾಂಗ್ರೆಸ್​ ಪಾಲಿಕೆ ಸದಸ್ಯರು ಬಿಜೆಪಿಗೆ ಬೆಂಬಲ ನೀಡುತ್ತಿರುವ ಕುರಿತು ಸಿ.ಟಿ.ರವಿ ಹೇಳಿಕೆ

ಇಂದು ಸಂಜೆ 4 ಗಂಟೆಗೆ ನಡೆಯಲಿರುವ ಮೆರವಣಿಗೆಯಲ್ಲಿ ಪಾಲಿಕೆ ಸದಸ್ಯರಾದ ಗುಣಶೇಖರ್, ಗೋವಿಂದರಾಜು, ಗಣೇಶ್​ರಾವ್ ಮತ್ತು ಆನಂದ್ ಅಧಿಕೃತವಾಗಿ ಕಮಲದ ಬಾವುಟ ಹಿಡಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನಾಲ್ವರು ಪಾಲಿಕೆ ಸದಸ್ಯರು ರೋಷನ್ ಬೇಗ್ ಅವರ ಪರಮಾಪ್ತರು ಎಂದು ತಿಳಿದುಬಂದಿದೆ.

ಶಿವಾಜಿನಗರದ ಜಯಮಹಲ್ ವಾರ್ಡ್ 63ರ ಸದಸ್ಯ ಎಂ.ಕೆ.ಗುಣಶೇಖರ್​ ಅವರು ಬಿಜೆಪಿ ಅಭ್ಯರ್ಥಿ ಶರವಣ ಅವರ ಜೊತೆಗೂಡಿ ಮತಯಾಚಿಸಿದ್ದಾರೆ. ಪಕ್ಷಾಂತರಗೊಂಡರೆ ಕಾಂಗ್ರೆಸ್ ತೆಗೆದುಕೊಳ್ಳುವ ಕ್ರಮದ ಬಗ್ಗೆ ಅರಿವಿದ್ದರೂ ಕಮಲಕ್ಕೆ ಬೆಂಬಲ ನೀಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದಕ್ಕೂ ಮೊದಲು ಸಚಿವ ಸಿ.ಟಿ. ರವಿ ಅವರು ಕೂಡ ಕಾಂಗ್ರೆಸ್​ ಪಾಲಿಕೆ ಸದಸ್ಯರು ಬಿಜೆಪಿಗೆ ಬೆಂಬಲ ನೀಡುತ್ತಿರುವ ಕುರಿತು ಸುಳಿವು ನೀಡಿದ್ದರು.

ABOUT THE AUTHOR

...view details