ಬೆಂಗಳೂರು:ಶಿವಾಜಿನಗರ ಕ್ಷೇತ್ರವನ್ನು ಉಳಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಎಲ್ಲಾ ಸಮುದಾಯದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಲು ಮುಂದಾಗಿದೆ.
ಕ್ರೈಸ್ತ, ಜೈನ ಸಮುದಾಯದ ಮತಯಾಚಿಸಿದ ರಿಜ್ವಾನ್ - ಕ್ರೈಸ್ತ, ಜೈನ ಸಮುದಾಯದ ಮತಯಾಚಿಸಿದ ರಿಜ್ವಾನ್
ಶಿವಾಜಿನಗರ ಕಾಂಗ್ರೆಸ್ನ ಭದ್ರಕೋಟೆ. ಆದರೆ ಅಲ್ಲಿ ಕಾಂಗ್ರೆಸ್ನ ಶಾಸಕರಾಗಿದ್ದ ರೋಷನ್ ಬೇಗ್ ಅನರ್ಹಗೊಂಡು ಬಿಜೆಪಿಯತ್ತ ಮುಖ ಮಾಡಿರುವುದರಿಂದ ಆ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಹರ ಸಾಹಸಪಡುತ್ತಿದೆ.
![ಕ್ರೈಸ್ತ, ಜೈನ ಸಮುದಾಯದ ಮತಯಾಚಿಸಿದ ರಿಜ್ವಾನ್](https://etvbharatimages.akamaized.net/etvbharat/prod-images/768-512-5120087-thumbnail-3x2-bng.jpg)
ಕ್ರೈಸ್ತ, ಜೈನ ಸಮುದಾಯದ ಮತಯಾಚಿಸಿದ ರಿಜ್ವಾನ್
ಕ್ರೈಸ್ತ, ಜೈನ ಸಮುದಾಯದ ಮತಯಾಚಿಸಿದ ರಿಜ್ವಾನ್
ಮಾಜಿ ಸಚಿವ ರೋಷನ್ ಬೇಗ್ ಈಗ ಕಾಂಗ್ರೆಸ್ನಿಂದ ದೂರ ಉಳಿದಿರುವುದರಿಂದ, ಹೇಗಾದರೂ ಮಾಡಿ ಶಿವಾಜಿನಗರ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಕೈ ನಾಯಕರು ರಣತಂತ್ರ ರೂಪಿಸಿದ್ದು, ಶಿವಾಜಿನಗರದಲ್ಲಿರುವ ಎಲ್ಲಾ ಸಮುದಾಯದವರ ಮನವೊಲಿಸಿಕೊಂಡು ಚುನಾವಣೆ ಎದುರಿಸಲು ಕಾಂಗ್ರೆಸ್ ಸಜ್ಜಾಗಿದೆ.
ಈ ಹಿನ್ನೆಲೆ ಇಂದು ಕ್ರೈಸ್ತ ಮತ್ತು ಜೈನ ಸಮುದಾಯದ ಮುಖಂಡರ ಭೇಟಿ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಹರ್ಷದ್ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.