ಹೊಸಕೋಟೆ:ರಾಜ್ಯ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಹೆಚ್ಚು ಸದ್ದು ಮಾಡುತ್ತಿರುವ ಹೊಸಕೋಟೆ ಕ್ಷೇತ್ರದಸೂಲಿಬೆಲೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮಾವತಿ ಸುರೇಶ್ ಭರ್ಜರಿ ಪ್ರಚಾರ ನಡೆಸಿದ್ದರು.
ಹೊಸಕೋಟೆ ಉಪ ಕದನ: ಕೈ ಅಭ್ಯರ್ಥಿಯಿಂದ ಭರ್ಜರಿ ಮತಯಾಚನೆ - ಹೊಸಕೋಟೆ ಕ್ಷೇತ್ರದ ಸೂಲಿಬೆಲೆ
ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಹೆಚ್ಚು ಸದ್ದು ಮಾಡುತ್ತಿರುವ ಹೊಸಕೋಟೆ ಕ್ಷೇತ್ರದ ಸೂಲಿಬೆಲೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮಾವತಿ ಸುರೇಶ್ ಭರ್ಜರಿ ಪ್ರಚಾರ ನಡೆಸಿದ್ದರು.
ಹೊಸಕೋಟೆ ಕದನ: ಕೈ ಅಭ್ಯರ್ಥಿಯಿಂದ ಭರ್ಜರಿ ಮತಯಾಚನೆ
ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 65 ವರ್ಷಗಳ ನಂತರ ಮಹಿಳೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಎಲ್ಲರೂ ವೋಟ್ ಮಾಡುವ ಮೂಲಕ ಆಶೀರ್ವಾದ ಮಾಡಿ ಮಹಿಳೆಯರ ಸಬಲೀಕರಣ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ದುಡಿಯಲು ಅವಕಾಶ ಮಾಡಬೇಕು ಎಂದು ಪದ್ಮಾವತಿ ಸುರೇಶ್ ಮನವಿ ಮಾಡಿದರು.
ಸೂಲಿಬೆಲೆ ಪಟ್ಟಣ ಹಾಗೂ ಹೋಬಳಿಯ ಹಸಿಗಾಳ, ಸೊಣ್ಣಹಳ್ಳಿಪುರ, ಕಮ್ಮಸಂದ್ರ, ಯನಗುಂಟೆ, ಸಾದಪ್ಪನಹಳ್ಳಿ, ಅತ್ತಿಬೆಲೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಬಿರುಸಿನ ಚುನಾವಣಾ ಪ್ರಚಾರ ಮಾಡಿದರು.