ಕರ್ನಾಟಕ

karnataka

ETV Bharat / city

ಸಿಎಂ ಇಂದಿನ ನಡೆಯತ್ತ ಪ್ರತಿಪಕ್ಷ ಕಾಂಗ್ರೆಸ್ ಗಂಭೀರ ಚಿತ್ತ! - Yediyurappa's resignation

ಬಿ.ಎಸ್.ಯಡಿಯೂರಪ್ಪ 2019ರ ಜುಲೈ 26ರಂದು ಅಧಿಕಾರವಹಿಸಿಕೊಂಡ ದಿನದಿಂದಲೂ ರಾಜ್ಯದಲ್ಲಿರುವುದು ಜನ ವಿರೋಧಿ ಸರ್ಕಾರ, ಭ್ರಷ್ಟ ಸರ್ಕಾರ, ಅಭಿವೃದ್ಧಿ ಕಾರ್ಯಗಳನ್ನು ನೀಡದ ಸರ್ಕಾರ ಎಂದು ಕಾಂಗ್ರೆಸ್ ತೆಗಳುತ್ತಲೇ ಬಂದಿದೆ. ಇದೀಗ ಸಿಎಂ ಬಿಎಸ್​ವೈ ಇಂದು ರಾಜೀನಾಮೆ ಸಲ್ಲಿಕೆ ಮಾಡಿದರೆ, ಇದು ತಮ್ಮ ಹೋರಾಟದ ಫಲ ಎಂದು ಹೇಳಿಕೊಳ್ಳುವ ಸಿದ್ಧತೆಯನ್ನು ಕಾಂಗ್ರೆಸ್ ಮಾಡಿದೆ.

Yediyurappa's resignation
ಸಿಎಂ ಇಂದಿನ ನಡೆಯತ್ತ ಪ್ರತಿಪಕ್ಷ ಕಾಂಗ್ರೆಸ್ ಗಂಭೀರ ಚಿತ್ತ

By

Published : Jul 26, 2021, 9:45 AM IST

ಬೆಂಗಳೂರು:ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ರಾಜೀನಾಮೆ ನೀಡಿದ್ರೆ, ಅದು ತಮ್ಮ ಹೋರಾಟದ ಫಲ ಎಂದು ಹೇಳಿಕೊಳ್ಳಲು ಕಾಂಗ್ರೆಸ್ ಪಕ್ಷ ಸಿದ್ಧತೆ ನಡೆಸಿಕೊಳ್ಳುತ್ತಿದೆ.

ಬಿ.ಎಸ್.ಯಡಿಯೂರಪ್ಪ 2019ರ ಜುಲೈ 26ರಂದು ಅಧಿಕಾರವಹಿಸಿಕೊಂಡ ದಿನದಿಂದಲೂ ರಾಜ್ಯದಲ್ಲಿರುವುದು ಜನ ವಿರೋಧಿ ಸರ್ಕಾರ, ಭ್ರಷ್ಟ ಸರ್ಕಾರ, ಅಭಿವೃದ್ಧಿ ಕಾರ್ಯಗಳನ್ನು ನೀಡದ ಸರ್ಕಾರ ಎಂದು ಕಾಂಗ್ರೆಸ್ ತೆಗಳುತ್ತಲೇ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸಿ ಅಧಿಕಾರಕ್ಕೆ ಬಂದ ಬಿಎಸ್​​​​​​​​ವೈ ನೇತೃತ್ವದ ಸರ್ಕಾರ, ಕಾಂಗ್ರೆಸ್​ನ 13 ಹಾಗೂ ಜೆಡಿಎಸ್​ನ ಮೂವರು ಶಾಸಕರನ್ನು ಸೆಳೆದಿತ್ತು.

ತಮ್ಮ ಶಾಸಕರನ್ನು ಸೆಳೆದ ಸರ್ಕಾರದ ವಿರುದ್ಧ ಕಾಂಗ್ರೆಸ್ ನಿರಂತರ ಹೋರಾಟ ಮಾಡಿಕೊಂಡು ಬಂದಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಕುಟುಂಬ ಸದಸ್ಯರು ನಡೆಸಿದ್ದಾರೆ ಎನ್ನಲಾದ ಅಕ್ರಮಗಳ ವಿರುದ್ಧ ಹೋರಾಟ, ಬೆಲೆ ಏರಿಕೆ ವಿರುದ್ಧ ಹೋರಾಟ, ಅಗತ್ಯ ವಸ್ತುಗಳ ಬೆಲೆ ಏರಿಕೆ, ರಾಜ್ಯಕ್ಕೆ ಬರಬೇಕಾದ ಜಿಎಸ್​ಟಿ ಪರಿಹಾರ ನೀಡಿಲ್ಲ, ಕೇಂದ್ರ-ರಾಜ್ಯ ಎರಡು ಕಡೆ ಒಂದೇ ಸರ್ಕಾರ ಇದ್ದರೆ ಅಭಿವೃದ್ಧಿ ಆಗುತ್ತದೆ ಎಂಬ ಸುಳ್ಳು ಭರವಸೆ ನೀಡಲಾಗಿದೆ.

ಇಂಧನ ಬೆಲೆ ಏರಿಕೆ ಇಳಿಕೆಗೆ ಆಗ್ರಹಿಸಿ ಪ್ರತಿಭಟನೆ, ರಾಜ್ಯಕ್ಕೆ ಎದುರಾಗಿರುವ ಸಂಕಷ್ಟಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸದಿದ್ದರೂ ಬಿಜೆಪಿ ಸಂಸದರು ಮಾತನಾಡುತ್ತಿಲ್ಲ ಎಂದು ಆರೋಪಿಸುತ್ತಲೇ ಬಂದಿರುವ ಪ್ರತಿಪಕ್ಷ ಕಾಂಗ್ರೆಸ್, ಇದೆಲ್ಲಕ್ಕೂ ರಾಜ್ಯದ ದುರ್ಬಲ ಸರ್ಕಾರವೇ ಕಾರಣ ಎಂದಿದೆ.

ರಾಜೀನಾಮೆ ನಿರ್ಧಾರ ನಮ್ಮ ಹೋರಾಟದ ಫಲ

ಇದೀಗ ಸಿಎಂ ಬಿಎಸ್​ವೈ ಇಂದು ರಾಜೀನಾಮೆ ಸಲ್ಲಿಕೆ ಮಾಡಿದರೆ, ಇದು ತಮ್ಮ ಹೋರಾಟದ ಫಲ ಎಂದು ಹೇಳಿಕೊಳ್ಳುವ ಸಿದ್ಧತೆಯನ್ನು ಕಾಂಗ್ರೆಸ್ ಮಾಡಿದೆ. ಅಲ್ಲದೆ, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮುಂದುವರಿದರೆ ಅದು ಅಪಾಯಕಾರಿ. ಯಡಿಯೂರಪ್ಪ ಜೊತೆ ಸಂಪುಟದ ಬಹುತೇಕ ಸಚಿವರು ಭ್ರಷ್ಟರಾಗಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರ ಮುಂದುವರಿಸಿದರೆ, ಇನ್ನಷ್ಟು ಭ್ರಷ್ಟಾಚಾರ ಹೆಚ್ಚಲಿದೆ.

ಸುಗಮವಾಗಿ ಸಾಗಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸುವುದು ಬಂದ ಬಿಜೆಪಿ ಸರ್ಕಾರ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದೆ. ಅಲ್ಲದೇ, ಕೇಂದ್ರದಿಂದ ಬರಬೇಕಾದ ಅನುದಾನ ಹಾಗೂ ಪರಿಹಾರಗಳನ್ನು ಒತ್ತಡ ಹೇರದೆ ಕಳೆದುಕೊಂಡಿದೆ. ಇದರಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಸಂಪೂರ್ಣ ಪತನಗೊಂಡು ಇನ್ನೊಮ್ಮೆ ಜನರ ತೀರ್ಪಿಗೆ ಮುಂದಾಗಬೇಕು. ರಾಜ್ಯಪಾಲರು ಸರ್ಕಾರವನ್ನ ವಿಸರ್ಜನೆಗೊಳಿಸಿ, ಚುನಾವಣೆಗೆ ಸಲಹೆ ನೀಡಬೇಕು ಎಂದು ಒತ್ತಾಯಿಸುತ್ತಾ ಬಂದಿದೆ.

ಇದೀಗ ಬಿಎಸ್​ವೈ ಒಂದೊಮ್ಮೆ ರಾಜೀನಾಮೆ ಸಲ್ಲಿಕೆ ಮಾಡಿದರೆ, ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬಂದರೆ ಅದನ್ನು ತಾವು ಎದುರಿಸಲು ಸಿದ್ದ ಎಂದು ಹೇಳಿದೆ. ಒಟ್ಟಾರೆ ರಾಜ್ಯದಲ್ಲಿ ಇರುವ ಸರ್ಕಾರ ಕಿತ್ತೊಗೆದು ಮತ್ತೊಮ್ಮೆ ಜನರ ಬಳಿ ತೆರಳಲು ಕಾಂಗ್ರೆಸ್ ಒತ್ತಡ ಹೇರುತ್ತಿದೆ. ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನೂ ಎರಡು ವರ್ಷ ಕಾಲಾವಕಾಶ ಇದ್ದು, ಪಕ್ಷ ಸಂಘಟನೆಗೆ ಅನ್ಯಪಕ್ಷಗಳ ಮಾಜಿ ಶಾಸಕರು ಹಾಗೂ ಮುಖಂಡರು ಪ್ರಯತ್ನದಲ್ಲಿರುವ ಕಾಂಗ್ರೆಸ್, ಜೊತೆ ಜೊತೆಗೆ ಯಾವುದೇ ಸಂದರ್ಭದಲ್ಲಿಯೂ ಎದುರಾದರೂ ಚುನಾವಣೆಗೆ ಮುಂದಾಗಲು ಸಜ್ಜಾಗುತ್ತಿದೆ.

ಇದನ್ನೂ ಓದಿ:ಸಂಸದೆ ಸುಮಲತಾಗೆ ಟಾಂಗ್: ಜೆಡಿಎಸ್​ ಶಾಸಕರಿಂದ ಕೆಆರ್​ಎಸ್​ ಡ್ಯಾಂಗೆ ದೃಷ್ಟಿ ಪೂಜೆ

ABOUT THE AUTHOR

...view details