ಬೆಂಗಳೂರು:ಕಳೆದ ವಾರ ಹೃದಯ ಸಂಬಂಧಿ ಚಿಕಿತ್ಸೆಗೆ ಒಳಗಾಗಿ ಸದ್ಯ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯರನ್ನ ಇಂದು ದಿನವಿಡೀ ವಿವಿಧ ನಾಯಕರು ಭೇಟಿ ಮಾಡಿ ಮಾತುಕತೆ ನಡೆಸಿದರು.
ಸಿದ್ದು ಆರೋಗ್ಯ ವಿಚಾರಿಸಿದ ವಿವಿಧ ಪಕ್ಷಗಳ ನಾಯಕರು, ಮಠಾಧೀಶರು.. 'ಹೌದು ಹುಲಿಯಾ' - Ishwar khandre met siddaramaiah
ಎರಡು ದಿನದಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಿದ್ದರಾಮಯ್ಯರನ್ನು ವಿವಿಧ ಪಕ್ಷಗಳ ನಾಯಕರು ಪಕ್ಷಾತೀತವಾಗಿ ಬಂದು ಭೇಟಿಯಾಗಿ ಆರೋಗ್ಯ ಸುಧಾರಣೆಗಾಗಿ ಹಾರೈಸಿ ತೆರಳುತ್ತಿದ್ದಾರೆ. ಮಾಜಿ ಸಚಿವ ಎಂ ಬಿ ಪಾಟೀಲ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಂಸದೆ ಸುಮಲತಾ ಅಂಬರೀಶ್ ಹಾಗೂ ಇಳಕಲ್ ಶ್ರೀ ಗುರು ಮಹಾಂತ ಸ್ವಾಮೀಜಿ ಸೇರಿ ಹೌದು ಹುಲಿಯಾ ಖ್ಯಾತಿಯ ಪೀರಪ್ಪ ಕೂಡಾ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಇಂದು ಬೆಳಗ್ಗೆ ಮಾಜಿ ಸಚಿವ ಎಂ ಬಿ ಪಾಟೀಲ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಆರೋಗ್ಯ ವಿಚಾರಿಸಿದರು. ಇವರ ನಂತರ ಹೌದು ಹುಲಿಯಾ ಎಂದು ಸುದ್ದಿಯಾದ ಪೀರಪ್ಪ, ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ತೆರಳಿದರು.
ಸಂಜೆ ಸಂಸದೆ ಸುಮಲತಾ ಅಂಬರೀಶ್ ಹಾಗೂ ಇಳಕಲ್ ಶ್ರೀ ಗುರು ಮಹಾಂತ ಸ್ವಾಮೀಜಿಯವರು ಕೂಡಾ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಎರಡು ದಿನದಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಿದ್ದರಾಮಯ್ಯರನ್ನು ವಿವಿಧ ನಾಯಕರು ಪಕ್ಷಾತೀತವಾಗಿ ಬಂದು ಭೇಟಿಯಾಗಿ ಆರೋಗ್ಯ ಸುಧಾರಣೆಗಾಗಿ ಹಾರೈಸಿ ತೆರಳುತ್ತಿದ್ದಾರೆ.