ದೇವನಹಳ್ಳಿ :ಕೋವಿಡ್ ಸಂಕಷ್ಟ ಹಾಗೂ ಲಾಕ್ ಡೌನ್ ಸಂದರ್ಭದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ನಿಸರ್ಗ ನಾರಾಯಣಸ್ವಾಮಿ ಕಾಣೆಯಾಗಿದ್ದು, ಅನ್ಲಾಕ್ ಆಗುತ್ತಿದ್ದಂತೆ ಏಕಾಏಕಿ ಭೇಟಿ ನೀಡಿ ಬೆಂಬಲಿಗರ ಜೊತೆ ಬರ್ತಡೇ ಸಂಭ್ರಮದಲ್ಲಿ ಮುಳುಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೊನಾ ಸಂಕಷ್ಟದಲ್ಲಿ ಗೈರು.. ಬರ್ತಡೇ ಪಾರ್ಟಿಗೆ ಹಾಜರ್: ಶಾಸಕ ನಿಸರ್ಗ ವಿರುದ್ಧ ಕಾಂಗ್ರೆಸ್ ಆರೋಪ
ಶಾಸಕ ನಿಸರ್ಗ ನಾರಾಯಣಸ್ವಾಮಿ ದೇವನಹಳ್ಳಿ ಹೋಬಳಿಯ ವಿವಿಧೆಡೆ ಕೇಕ್ ಕತ್ತರಿಸಿ ಬೆಂಬಲಿಗರ ಜೊತೆ ಸಂಭ್ರಮಾಚರಣೆ ಮಾಡಿದ್ದಾರೆ. ಲಾಕ್ಡೌನ್ ವೇಳೆ ಜನತೆ ಏನಾಗಿದ್ದಾರೆ ಎಂದು ಮನೆ ಬಿಟ್ಟು ಹೊರಗೆ ಬಂದು ನೋಡಲಿಲ್ಲ. ಕ್ಷೇತ್ರಕ್ಕೆ ಕನಿಷ್ಠ ಒಮ್ಮೆಯೂ ಭೇಟಿ ನೀಡಲಿಲ್ಲ. ಜನ ಸಾಮಾನ್ಯರ ಕಷ್ಟ ಕೇಳಲು ಕ್ಷೇತ್ರಕ್ಕೆ ಬಾರದ ಶಾಸಕರು ತಮ್ಮ ಪಟಾಲಂ ಕಟ್ಟಿಕೊಂಡು ಹುಟ್ಟುಹಬ್ಬ ಆಚರಣೆಗೆ ಬಂದಿರುವುದು ದುರಂತ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ಕಿಡಿಕಾರಿದ್ದಾರೆ.
ಕೊರೊನಾ ಎರಡನೇ ಅಲೆ ಜನಸಮುದಾಯಕ್ಕೆ ಬಹಳ ಹೊಡೆತ ನೀಡಿದೆ. ಆಸ್ಪತ್ರೆಯಲ್ಲಿ ಬೆಡ್, ಆಕ್ಸಿಜನ್ ಸಿಗದೆ ಜನ ಸಾಮಾನ್ಯರು ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದಾರೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ತೂಬಗೆರೆ ಹೋಬಳಿ ಜನರು ಕೂಡ ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಕ್ಷೇತ್ರದ ಶಾಸಕ ನಿಸರ್ಗ ನಾರಾಯಣಸ್ವಾಮಿ ಒಂದೇ ಒಂದು ಬಾರಿ ಕೂಡ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಜನರ ಕಷ್ಟಗಳನ್ನು ಅಲಿಸಿ, ಕುಂದು ಕೊರತೆಗಳನ್ನು ಬಗೆಹರಿಸಿಲ್ಲ ಎಂದು ಕೈ ಮುಖಂಡರು ಆರೋಪಿಸಿದರು.
ಹೋಬಳಿಯ ವಿವಿಧೆಡೆ ಕೇಕ್ ಕತ್ತರಿಸಿ ಬೆಂಬಲಿಗರ ಜೊತೆ ಸಂಭ್ರಮಾಚರಣೆ ಮಾಡಿದ್ದಾರೆ. ಲಾಕ್ಡೌನ್ ವೇಳೆ ಜನತೆ ಏನಾಗಿದ್ದಾರೆ ಎಂದು ಮನೆ ಬಿಟ್ಟು ಹೊರಗೆ ಬಂದು ನೋಡಲಿಲ್ಲ. ಕ್ಷೇತ್ರಕ್ಕೆ ಕನಿಷ್ಠ ಒಮ್ಮೆಯೂ ಭೇಟಿ ನೀಡಲಿಲ್ಲ. ಜನಸಾಮಾನ್ಯರ ಕಷ್ಟ ಕೇಳಲು ಕ್ಷೇತ್ರಕ್ಕೆ ಬಾರದ ಶಾಸಕರು ತಮ್ಮ ಪಟಾಲಂ ಕಟ್ಟಿಕೊಂಡು ಹುಟ್ಟುಹಬ್ಬ ಆಚರಣೆಗೆ ಬಂದಿರುವುದು ದುರಂತ ಎಂದು ಕಿಡಿಕಾರಿದರು.