ಬೆಂಗಳೂರು: ಏ. 20ರವರೆಗೆ ವಿಧಿಸಲಾಗಿರುವ ನಿಷೇಧಾಜ್ಞೆ ಕುರಿತು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ 144 ಸೆಕ್ಷನ್ ಇತಿಮಿತಿಗಳ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಕಮೀಷನರ್ ಕಮಲ್ ಪಂತ್ ಸಭೆ ನಡೆಸುತ್ತಿದ್ದಾರೆ.
ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿ ಸೆ.144 ಜಾರಿ ಸಾಧ್ಯವೇ ? ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳ ತೆರೆದು 144 ಜಾರಿಗೆ ತರೋದು ಕಷ್ಟವಾಗಿದೆ. ಈಗಾಗಲೇ ನೈಟ್ ಕರ್ಫ್ಯೂ ಕಠಿಣವಾಗಿ ಜಾರಿಗೆ ತರಲು ಸಾಧ್ಯವಾಗಿಲ್ಲ. ಎಲ್ಲದಕ್ಕೂ ಅವಕಾಶ ಮಾಡಿಕೊಟ್ಟು ನಿಷೇಧಾಜ್ಞೆ ತರುವುದು ಕಷ್ಟ ಎಂದು ಚರ್ಚೆ ನಡೆದಿದೆ.