ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ಆರೋಪಿಗಳ ಬಂಧನಕ್ಕೆ ನಡೆಸುತ್ತಿರುವ ಕಾರ್ಯಾಚರಣೆ ವಿವರವನ್ನು ಪೊಲೀಸ್ ಅಧಿಕಾರಿಗಳು ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಸಲ್ಲಿಕೆ ಮಾಡಿದರು.
ಗೃಹ ಸಚಿವರ ನಿವಾಸಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ-ಸಿಸಿಬಿ ಮುಖ್ಯಸ್ಥ ಭೇಟಿ - ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಭೇಟಿ
ಆರ್.ಟಿ ನಗರದಲ್ಲಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹಾಗೂ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಆಗಮಿಸಿದರು.
ಗೃಹ ಸಚಿವರ ನಿವಾಸಕ್ಕೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಭೇಟಿ
ಆರ್.ಟಿ ನಗರದಲ್ಲಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹಾಗೂ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಆಗಮಿಸಿದರು. ಭೇಟಿ ನಂತರ ಡಿಜೆ ಹಳ್ಳಿ, ಕೆಜಿ ಹಳ್ಳಿ ಘಟನೆ ನಂತರದ ಬೆಳವಣಿಗೆ ಸಂಬಂಧ ಮಾಹಿತಿ ನೀಡಿದರು.
ಗಲಭೆಕೋರರ ಬಂಧನಕ್ಕೆ ನಡೆಸುತ್ತಿರುವ ಪೊಲೀಸ್ ಕಾರ್ಯಾಚರಣೆ, ಕಳೆದ ರಾತ್ರಿ ನಡೆಸಿದ ಆರೋಪಿಗಳ ಬಂಧನ ಕಾರ್ಯ, ಕಾರ್ಪೊರೇಟರ್ ಪತಿಯ ಬಂಧನ ಸೇರಿದಂತೆ ಕಳೆದ 24 ಗಂಟೆಯಲ್ಲಿ ಕಲೆಹಾಕಿರುವ ಮಾಹಿತಿಯನ್ನು ಗೃಹ ಸಚಿವರಿಗೆ ನೀಡಿದರು.