ಕರ್ನಾಟಕ

karnataka

ETV Bharat / city

ಫೇಸ್​​ಬುಕ್​ನಲ್ಲಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಬರಹ: ದೂರು ದಾಖಲು - ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಬರಹ

ಮಾಜಿ ಸಿಎಂ ಸಿದ್ದರಾಮಯ್ಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪಡೆಯುತ್ತಿದ್ದಾರೆ. ಈ ಕುರಿತು ಅವರ ಫೋಟೊ ಟ್ಯಾಗ್ ಮಾಡಿ ಫೇಸ್​ಬುಕ್​ನಲ್ಲಿ ಕೀಳುಮಟ್ಟದ ಕಮೆಂಟ್ ಮಾಡಿದ ಕಿಡಿಗೇಡಿಗಳ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

comment-on-siddaramaiah-case-against-two-persons
ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಬರಹ

By

Published : Aug 5, 2020, 9:33 AM IST

ಬೆಂಗಳೂರು:ಕೊರೊನಾ ಸೋಂಕಿನಿಂದ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಫೇಸ್​ಬುಕ್​ನಲ್ಲಿ ಅವಹೇಳಕಾರಿ ಕಮೆಂಟ್ಸ್ ಹಾಕಿದ ಮಂಜು ಮತ್ತು ಆನಂದ್ ಕುಮಾರ್ ಎಂಬುವವರ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಕಾಂಗ್ರೆಸ್ ಲೀಗಲ್ ಟೀಂ ದೂರು ದಾಖಲಿಸಿದೆ.

ದೂರಿನ ಪ್ರತಿ

ಸದ್ಯ ಮಾಜಿ ಸಿಎಂ ಸಿದ್ದರಾಮಯ್ಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪಡೆಯುತ್ತಿದ್ದಾರೆ. ಈ ಕುರಿತು ಅವರ ಫೋಟೋ ಟ್ಯಾಗ್ ಮಾಡಿ ಫೇಸ್​ಬುಕ್​ನಲ್ಲಿ ಕೀಳುಮಟ್ಟದ ಕಮೆಂಟ್ ಮಾಡಿದ್ದಾರೆ. ಹೀಗಾಗಿ ಇಬ್ಬರು ಕಿಡಿಗೇಡಿಗಳ ವಿರುದ್ಧ ಕಾಂಗ್ರೆಸ್ ಲೀಗಲ್ ಟೀಂ ದೂರು ನೀಡಿದ್ದು, ಸದ್ಯ ಈ ಬಗ್ಗೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ದೂರಿನ ಪ್ರತಿ

ಎರಡು ದಿನಗಳ ಹಿಂದೆಯಷ್ಟೇ ಕೊರೊನಾ ಸೋಂಕಿಗೆ ತುತ್ತಾದ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಬರಹ ಹಾಕಿದ್ದ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಸದಸ್ಯನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಸದ್ಯ ಇವರನ್ನೂ ಬಂಧಿಸಬೇಕು ಎಂಬ ಆಗ್ರಹ ಕಾಂಗ್ರೆಸ್​ ಐಟಿ ಸೆಲ್​​ನಿಂದ ಮಾಡಲಾಗಿದೆ.

ABOUT THE AUTHOR

...view details