ಬೆಂಗಳೂರು:ಕೊರೊನಾ ಪರೀಕ್ಷೆ ಮಾಡಲು ರಾಜ್ಯದಲ್ಲೀಗ 10 ಲ್ಯಾಬ್ಗಳಿದ್ದು, ಪರೀಕ್ಷೆ ರಿಸ್ಟಲ್ ಬರಲು 5-6 ಗಂಟೆಯಾಗುತ್ತೆ. ಹೀಗಾಗಿ, ಕೋವಿಡ್-19 ಪರೀಕ್ಷೆಗೆ ಏಪ್ರಿಲ್ 8 ರಂದು ಭಾರತಕ್ಕೆ ಕಿಟ್‌ಗಳ ಆಮದು ಮಾಡಲಾಗುತ್ತಿದ್ದು, ಇದನ್ನ ಕೇವಲ ಹಾಟ್‌ಸ್ಪಾಟ್ ಎಂದು ಗುರುತಿಸಿರುವ ಸ್ಥಳಗಳಿಗೆ ಮಾತ್ರ ICMR ನೀಡಲಿದೆ.
ಬೆಂಗಳೂರು, ಮೈಸೂರು, ಬೆಳಗಾವಿಯಂತಹ ಹಾಟ್ಸ್ಪಾಟ್ಗಳಲ್ಲಿ ಕಿಟ್ ಬಳಕೆ ಮಾಡಲಾಗುತ್ತೆ. ರ‍್ಯಾಪಿಡ್ ಕಿಟ್‌ನಿಂದ ಅತಿ ಸುಲಭವಾಗಿ ಮತ್ತು ವೇಗವಾಗಿ ಕೋವಿಡ್ 19 ಟೆಸ್ಟ್ ಮಾಡಬಹುದು. ಈ ಹಿನ್ನೆಲೆಯಲ್ಲಿ ಸೋಂಕಿತರು ಹೆಚ್ಚಿರುವ ಪ್ರದೇಶದಲ್ಲಿ ಕಿಟ್ ನೀಡಲು ನಿರ್ಧಾರ ಮಾಡಲಾಗಿದ್ದು, ICMR ನಿಂದ 7 ಲಕ್ಷ ರ‍್ಯಾಪಿಡ್ ಆ್ಯಂಟಿ ಬಾಡಿ ಟೆಸ್ಟಿಂಗ್ ಕಿಟ್ ಖರೀದಿ ಮಾಡಲು ಮುಂದಾಗಿದೆ. ಕೋವಿಡ್-19 ಪರೀಕ್ಷೆಗೆ ಏಪ್ರಿಲ್ 8 ರಂದು ಭಾರತಕ್ಕೆ ಕಿಟ್‌ಗಳ ಆಮದು ಮಾಡಲಾಗುತ್ತಿದ್ದು, ಇದನ್ನ ಕೇವಲ ಹಾಟ್‌ಸ್ಪಾಟ್ ಎಂದು ಗುರುತಿಸಿರುವ ಸ್ಥಳಗಳಿಗೆ ಮಾತ್ರ ICMR ನೀಡಲಿದೆ.