ಕರ್ನಾಟಕ

karnataka

ವಿಧಾನಸಭೆಯಲ್ಲಿ ಕೆ ಜಿ ಬೋಪಯ್ಯ- ಸಿದ್ದರಾಮಯ್ಯ ನಡುವೆ ಸರ್ವನಾಶ್‌ ಕದನ..

By

Published : Mar 15, 2022, 6:49 PM IST

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ, ಬೋಪಯ್ಯ ಅವರು ಸಬ್ ಕಾ ಸಾತ್- ಸಬ್ ಕಾ ವಿಕಾಸ್, ಸಬ್ ಕಾ ವಿಕಾಸ್-ಕಾಂಗ್ರೆಸ್ ಸರ್ವನಾಶ್ ಮುಂದಿನ ಘೋಷಣೆ ಎಂದು ಕುಟುಕಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಸಿದ್ದರಾಮಯ್ಯ, ಸಬ್ ಕಾ ಸಾತ್- ಸಬ್ ಕಾ ವಿಕಾಸ್, ಸಬ್ ಕಾ ವಿಕಾಸ್- ಬಿಜೆಪಿ ಕೋ ಸರ್ವ್ ನಾಶ್ ಕರನಾ ಎಂದು ತಿರುಗೇಟು ನೀಡಿದರು..

Assembly budget meeting
ವಿಧಾನಸಭೆಯಲ್ಲಿ ಬಜೆಟ್​ ಮೇಲಿನ ಚರ್ಚೆ ವೇಳೆ ಸಿದ್ದರಾಮಯ್ಯ ಮಾತಿಗೆ ಕೆ.ಜಿ.ಬೋಪಯ್ಯ ತಿರುಗೇಟು ನೀಡಿದರು.

ಬೆಂಗಳೂರು :ಮೊನ್ನೆ ನಡೆದ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ನೋಡಿದರೆ ಯಾರು ಸರ್ವನಾಶ ಎಂಬುದು ತಿಳಿಯುತ್ತದೆ. ಸರ್ವನಾಶವಾಗುವುದು ದೇಶ ಅಥವಾ ಜನರದ್ದಲ್ಲ, ಕಾಂಗ್ರೆಸ್​ ಪಕ್ಷದ್ದು.

‘2023ರ ವೇಳೆಗ ಕಾಂಗ್ರೆಸ್​ ಪಕ್ಷ ಸರ್ವನಾಶ ಆಗಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮಾತಿಗೆ ಬಿಜೆಪಿ ನಾಯಕ ಕೆ.ಜಿ.ಬೋಪಯ್ಯ ಟಾಂಗ್​ ನೀಡಿದರು.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ, ಬೋಪಯ್ಯ ಅವರು ಸಬ್ ಕಾ ಸಾತ್- ಸಬ್ ಕಾ ವಿಕಾಸ್, ಸಬ್ ಕಾ ವಿಕಾಸ್-ಕಾಂಗ್ರೆಸ್ ಸರ್ವನಾಶ್ ಮುಂದಿನ ಘೋಷಣೆ ಎಂದು ಕುಟುಕಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಸಿದ್ದರಾಮಯ್ಯ, ಸಬ್ ಕಾ ಸಾತ್- ಸಬ್ ಕಾ ವಿಕಾಸ್, ಸಬ್ ಕಾ ವಿಕಾಸ್- ಬಿಜೆಪಿ ಕೋ ಸರ್ವ್ ನಾಶ್ ಕರನಾ ಎಂದು ತಿರುಗೇಟು ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಕೆ.ಜಿ.ಬೋಪಯ್ಯ ಅವರು ನೀವು ದೇಶವನ್ನೇ ಸರ್ವನಾಶ್ ಎಂದು ಕರೆದಿದ್ದೀರಿ, ದೇಶದ ಸರ್ವನಾಶ ಅಲ್ಲ, 2023ಕ್ಕೆ ಕಾಂಗ್ರೆಸ್​ ರಾಜ್ಯದಲ್ಲಿ ಸರ್ವನಾಶ ಆಗಲಿದೆ ಎಂದು ಟಾಂಗ್​ ನೀಡಿದರು.

ಈ ವೇಳೆ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ, ನೀವು ಭ್ರಮೆಯಲ್ಲಿದ್ದೀರಿ, ಕರ್ನಾಟಕದ ಜನರ ನಾಡಿಮಿಡಿತ ನಿಮಗೆ ಗೊತ್ತಿಲ್ಲ, ನೀವು ಕೊಡಗಿನವರು. ಈ ರಾಜ್ಯದ ಜನ ನೀವು ಎಷ್ಟು ದಿನಕ್ಕೆ ತೊಲಗ್ತೀರಾ ಎಂದು ಕಾಯುತ್ತಿದ್ದಾರೆ. ಬಿಜೆಪಿ ಇಡೀ ರಾಜ್ಯದ ಜನರನ್ನು ನಾಶ ಮಾಡಿದೆ ಎಂದು ಕಿಡಿಕಾರಿದರು.

ಎಲ್ಲಾ ಸರ್ಕಾರದಲ್ಲಿ ಕೊಡಗಿನ ಮಂತ್ರಿಗಳು ಇರುತ್ತಿದ್ದರು. ಆದರೆ, ನಿಮಗೆ ಮತ್ತು ಅಪ್ಪಚ್ಚು ರಂಜನ್ ಅವರಿಗೆ ಮಂತ್ರಿಸ್ಥಾನ ನೀಡಿಲ್ಲ ಎಂದು ಕೆ.ಜೆ. ಜಾರ್ಜ್ ಹೇಳಿದರು. ಆಗ ಬೋಪಯ್ಯ ಅವರು, ನೀವೆಲ್ಲಾ ಮಂತ್ರಿ ಆಗಿ ಕೊಡಗು ಹಾಳು ಮಾಡಿದ್ದೀರಿ.

ಬೊಮ್ಮಾಯಿ, ಯಡಿಯೂರಪ್ಪ, ಸದಾನಂದ ಗೌಡರು, ಜಗದೀಶ್ ಶೆಟ್ಟರ್ ಕೊಡಗು ಅಭಿವೃದ್ಧಿಗೆ ಹಣ ನೀಡಿದ್ದಾರೆ. ಇನ್ನು ಮುಂದಿನ ಚುನಾವಣೆಗಳಲ್ಲಿ ಕೊಡಗಿನಲ್ಲಿ ಕಾಂಗ್ರೆಸ್ ಪಕ್ಷ ಜಯ ಸಾಧಿಸುವುದಿಲ್ಲ ಎಂದರು.

ABOUT THE AUTHOR

...view details