ಕರ್ನಾಟಕ

karnataka

ETV Bharat / city

ಈಶ್ವರಪ್ಪ ನೀತಿಸಂಹಿತೆ ಉಲ್ಲಂಘನೆ ಪ್ರಕರಣ: ಕೇಸ್ ಖುಲಾಸೆಗೊಳಿಸಿದ ಕೋರ್ಟ್​ - ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪಗೆ ಬಿಗ್​ ರಿಲೀಫ್​ ಸಿಕ್ಕಿದೆ.

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ

By

Published : Mar 23, 2019, 7:16 PM IST

Updated : Mar 23, 2019, 8:22 PM IST

ಬೆಂಗಳೂರು: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ದದ ಮಾದರಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಕೇಸ್ ಖುಲಾಸೆಗೊಳಿಸಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ನ್ಯಾ. ರಾಮಚಂದ್ರ ಡಿ ಹುದ್ದರ್​ ಆದೇಶ ಹೊರಡಿಸಿದ್ದಾರೆ. ಕೆ.ಎಸ್.ಈಶ್ವರಪ್ಪ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಕೇಸ್ ದಾಖಲಾಗಿತ್ತು.

ಬಹಿರಂಗವಾಗಿ ಗುಂಡ್ಲುಪೇಟೆಯ ಚಿಕ್ಕಾಟಿ ಗ್ರಾಮದಲ್ಲಿ ಭಾಷಣದ ವೇಳೆ,‌ ಕಾಂಗ್ರೆಸ್​ನಿಂದ 4 ಸಾವಿರ ತೆಗೆದುಕೊಳ್ಳಿ, ಬಿಜೆಪಿಗೆ ಮತ ಹಾಕಿ 5 ಸಾವಿರ ಹಣ ಪಡೆದುಕೊಳ್ಳಿ ಎಂಬ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿದ್ದರು. ಮತದಾರರಿಗೆ ಹಣ ನೀಡುವ ಆಮಿಷ ಆರೋಪ ಸಂಬಂಧ, ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಈ ಬಗ್ಗೆ ಸೂಕ್ತ ಸಾಕ್ಷ್ಯಾಧಾರ ‌ಕೊರತೆ ಹಿನ್ನೆಲೆಯಲ್ಲಿ‌ ಪ್ರಕರಣವನ್ನು‌ ನ್ಯಾಯಾಲಯ ಖುಲಾಸೆಗೊಳಿಸಿದೆ.

Last Updated : Mar 23, 2019, 8:22 PM IST

ABOUT THE AUTHOR

...view details