ಕರ್ನಾಟಕ

karnataka

ETV Bharat / city

ಬಿಜೆಪಿಯವರು ಇಂತಹವರು... ಸಿ.ಎಂ.ಇಬ್ರಾಹಿಂ ವಾಗ್ದಾಳಿ - ಕರ್ನಾಟಕ ಪ್ರವಾಹ

ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರದಿಂದ ಪರಿಹಾರದ ಹಣ ತರದ ಬಿಜೆಪಿಯವರು ನಪುಂಸಕರು ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹರಿಹಾಯ್ದಿದ್ದಾರೆ.

ಸಿ.ಎಂ.ಇಬ್ರಾಹಿಂ

By

Published : Oct 4, 2019, 7:13 AM IST

ಬೆಂಗಳೂರು:ನೆರೆ ಪರಿಹಾರ ತರದ ಬಿಜೆಪಿಯವರು ನಪುಂಸಕರು ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ವಾಗ್ದಾಳಿ ನಡೆಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾವು ಹುಟ್ಟಿಸಿದ ಮಕ್ಕಳನ್ನು ತಮ್ಮ ಮಕ್ಕಳು ಎಂದು ಹೇಳಿಕೊಳ್ಳುತ್ತಾರೆ. ಈಗ ಕೂಡ ಅವು ಬೀದಿ ಪಾಲಾಗಿವೆ. ದೆಹಲಿ ಬಾಗಿಲಲ್ಲಿ ರಾಜ್ಯದ ಮಾನ ಹರಾಜಿಟ್ಟಿದ್ದಾರೆ. ಇವರಿಗೆ ಸ್ವಾಭಿಮಾನ ಇದ್ದರೆ, ಮೊದಲು ನೆರೆ ಪರಿಹಾರದ ದುಡ್ಡು ತರಲಿ. ಇಲ್ಲವಾದರೆ ರಾಜೀನಾಮೆ ನೀಡಲಿ ಎಂದು ಕಿಡಿ‌ಕಾರಿದರು.

ಕೇಂದ್ರದಲ್ಲಿ ಪರಿಹಾರ ಕೊಡಲು ದುಡ್ಡೇ ಇಲ್ಲ. ಡಾಲರ್ ಎದುರು ರೂಪಾಯಿ ಕುಸಿದು ಹೋಗಿದೆ. ಪೆಟ್ರೋಲ್ ಬೆಲೆ ಕೂಡ ಹೆಚ್ಚಾಗಿದೆ. 25 ಸಂಸದರಿಗೆ ನಾಚಿಕೆಯಾಗಬೇಕು. ಪ್ರತಾಪ್ ಸಿಂಹ ಮೋದಿಯ ಫೋಟೋ ಪೂಜೆ ಮಾಡಲಿ. ಪ್ರತಾಪ್‌ ಸಿಂಹನ ಕೆಟಗರಿಗೆ ಮೋದಿ ದೇವರು ಬಿಡಿ. ಇಂತಹ ಸಂಸದರಿಗೆ ಸೀರೆ ಕೊಡಲು ನಮ್ಮ ಬಳಿ ದುಡ್ಡಿಲ್ಲ. ಯಲ್ಲಮ್ಮನ ಗುಡ್ಡಕ್ಕೆ ಕಳಿಸೋದು ಒಳ್ಳೇದು ಎಂದು ವ್ಯಂಗ್ಯವಾಡಿದರು


ಸಾರ್ವಜನಿಕ ಲೆಕ್ಕಪತ್ರ ಸಮಿತಿ ಶಿಫಾರಸು ಜಾರಿಗೊಳಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ: ಹೆಚ್.ಕೆ.ಪಾಟೀಲ್

ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸದ ಹಾಗೂ ಅನುಪಾಲನಾ ವರದಿ ಸಮರ್ಪಕವಾಗಿ ನೀಡದ ಅಧಿಕಾರಿಗಳ ವಿಳಂಬ ಧೋರಣೆಯನ್ನು ದುರ್ನಡತೆ ಎಂದು ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳಲು ಹೊಸ ನಿಯಮ ತರಲು ಶಿಫಾರಸು ಮಾಡಲಾಗಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಹೆಚ್‌.ಕೆ.ಪಾಟೀಲ್ ತಿಳಿಸಿದರು.

ವಿಧಾನಸೌಧದಲ್ಲಿ ಸಾರ್ವಜನಿಕ ಲೆಕ್ಕಪತ್ರಗಳ‌ ಸಮಿತಿಯ ಮೊದಲ‌ ಸಭೆ ಬಳಿಕ‌ ಮಾತನಾಡಿದ ಅವರು, ಲೋಕೋಪಯೋಗಿ, ಕೃಷಿ, ಶಿಕ್ಷಣ, ವೈದ್ಯಕೀಯ ಶಿಕ್ಷಣ, ಸಾರಿಗೆ ಇಲಾಖೆಗಳು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಶಿಫಾರಸುಗಳಿಗೆ ಉತ್ತರ ನೀಡುವಲ್ಲಿ ಕನಿಷ್ಠ 14-20 ವರ್ಷ ತೆಗೆದುಕೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಈ ವ್ಯವಸ್ಥೆಯನ್ನು ಹೀಗೆ ಪೋಷಿಸಿಕೊಂಡು ಹೋಗಲು ಅಸಾಧ್ಯ ಎಂದರು.

ಹೆಚ್.ಕೆ.ಪಾಟೀಲ್ ಸುದ್ದಿಗೋಷ್ಠಿ

ಇಲಾಖೆಗಳು ಅನುಪಾಲನಾ ವರದಿಗಳನ್ನು ನೀಡುವ ಕ್ರಮ ಮತ್ತು ಕಾಲಮಿತಿ ಕಾರ್ಯಕ್ರಮ ತಕ್ಷಣದಿಂದ ಅನುಷ್ಠಾನಗೊಳ್ಳಬೇಕು. ಇದರಲ್ಲಿ ವಿಫಲರಾದರೆ ಅಥವಾ ಸಮಿತಿಗೆ ಉತ್ತರ ಒದಗಿಸಲು ವಿಳಂಬ ಮಾಡುವ ಅಧಿಕಾರಿಗಳಿಗೆ ಅಂಕುಶ ಹಾಕಬೇಕಾಗಿರುವ ಅಗತ್ಯದ ಬಗ್ಗೆ ಸಮಿತಿ ಸಭೆಯಲ್ಲಿ ಒಮ್ಮತದ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ತಿಳಿಸಿದರು.

ಈ‌ ನಿಟ್ಟಿನಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಗಳಡಿ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ ವರದಿಗಳಿಗೆ ಉತ್ತರ ನೀಡದ ಹಾಗೂ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ಶಿಫಾರಸು ಅನುಷ್ಠಾನ ಮಾಡದ ಅಧಿಕಾರಿಗಳ ವಿಳಂಬ ಧೋರಣೆಯನ್ನು ದುರ್ನಡತೆ ಎಂದು ಪರಿಗಣಿಸಿ ಶಿಸ್ತುಕ್ರಮ ಕೈಗೊಳ್ಳಲು ಹೊಸ ನಿಯಮ ಸೇರ್ಪಡೆಗೆ ಸಮಿತಿ ಶಿಫಾರಸು ಮಾಡಿದೆ ಎಂದು‌ ವಿವರಿಸಿದರು.

ನನ್ನನ್ನು ಪರಿಗಣಿಸುವ ಬಗ್ಗೆ ವಿಶ್ವಾಸವಿದೆ:

ಇದಕ್ಕೂ ಮುನ್ನ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ನಾನೂ ಆಕಾಂಕ್ಷಿಯಾಗಿದ್ದು, ನನ್ನನ್ನು ಪರಿಗಣಿಸುವ ವಿಶ್ವಾಸ ಇದೆ ಎಂದು ತಿಳಿಸಿದರು.

ನ.9 ರಂದು ಸಿಎಲ್‌ಪಿ ಸಭೆ ಕರೆದಿದ್ದಾರೆ. ಚುನಾವಣೆ ನಡೆಸುತ್ತಾರೋ ಇಲ್ಲವೋ‌ ಗೊತ್ತಿಲ್ಲ. ಹೈಕಮಾಂಡ್ ಯಾವ ನಿರ್ಧಾರ ಮಾಡುತ್ತದೆ ಗೊತ್ತಿಲ್ಲ. ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿರುವ ಅನುಭವ ಇದೆ ಎಂದರು.

ABOUT THE AUTHOR

...view details