ಬೆಂಗಳೂರು: ಜಿಲ್ಲಾಧಿಕಾರಿ, ಸಿಇಒಗಳ ಜತೆಗಿನ ಸಭೆ ನಡೆಸುತ್ತಿರುವಾಗಲೇ ಮಧ್ಯ ಹೊರ ಬಂದ ಸಿಎಂ ಯಡಿಯೂರಪ್ಪ, ಕಾಂಗ್ರೆಸ್‌ನ ಮಾಜಿ ಶಾಸಕ ಕೆ ಎನ್ ರಾಜಣ್ಣ ಬಳಿ ಚರ್ಚೆ ನಡೆಸಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಸಭೆಯಿಂದ ಹೊರಬಂದು ಕೆ ಎನ್ ರಾಜಣ್ಣ ಜತೆ ಸಿಎಂ ಯಡಿಯೂರಪ್ಪ ಚರ್ಚೆ.. ಕುತೂಹಲಕ್ಕೆ ಕಾರಣವಾದ ಬಿಎಸ್‌ವೈ ನಡೆ.. - ಬಿಎಸ್‌ವೈ ಜೊತೆ ರಾಜಣ್ಣ ಮಾತುಕತೆ
ಜಿಲ್ಲಾಧಿಕಾರಿ, ಸಿಇಒಗಳ ಜತೆಗಿನ ಸಭೆ ನಡೆಯುತ್ತಿರುವ ಸಂದರ್ಭದಲ್ಲೇ ಮಧ್ಯ ಹೊರ ಬಂದ ಸಿಎಂ ಯಡಿಯೂರಪ್ಪ ಕಾಂಗ್ರೆಸ್‌ನ ಮಾಜಿ ಶಾಸಕ ಕೆ ಎನ್ ರಾಜಣ್ಣ ಬಳಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಜೊತೆ ಆಗಮಿಸಿದ ಕೆ ಎನ್ ರಾಜಣ್ಣ, ವಿಧಾನಸೌಧಕ್ಕೆ ದಿಢೀರ್ ಭೇಟಿ ನೀಡಿದರು. ಸಿಎಂ ಜತೆ ವಿಧಾನಸೌಧದ ಸಮ್ಮೇಳನ ಸಭಾಂಗಣದ ಹೊರಗಿನ ಕಾರಿಡಾರ್ನಲ್ಲಿ ಸಮಾಲೋಚನೆ ನಡೆಸಿದರು. ಈ ವೇಳೆ ಬಿಎಸ್ವೈಗೆ ಕೆಲವು ಮಾಹಿತಿಗಳನ್ನು ನೀಡಿದರು ಎನ್ನಲಾಗಿದೆ.
ಹೆಚ್ಡಿಕೆ ಸರ್ಕಾರ ಇತ್ತೀಚಿಗೆ ತುಮಕೂರು ಡಿಸಿಸಿ ಬ್ಯಾಂಕ್ನ ಸೂಪರ್ ಸೀಡ್ ಮಾಡಿತ್ತು. ಈ ಸಂಬಂಧ ಬಿಎಸ್‌ವೈ ಜೊತೆ ರಾಜಣ್ಣ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಲಾಂಬಿಕಾದೇವಿಯವರನ್ನು ಕರೆಯಿಸಿದ ಸಿಎಂ ಯಡಿಯೂರಪ್ಪ ಮಾಹಿತಿಯನ್ನು ಪಡೆದುಕೊಂಡರು.