ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ ಕೊರೊನಾ ನಿರ್ಬಂಧ ಮತ್ತಷ್ಟು ಬಿಗಿ ಸಾಧ್ಯತೆ; ಸುಳಿವು ಕೊಟ್ಟ ಸಿಎಂ - ಸಿಎಂ ಬಿ.ಎಸ್​. ಯಡಿಯೂರಪ್ಪ ನ್ಯೂಸ್​

ಕೊರೊನಾ ಹಿನ್ನಲೆಯಲ್ಲಿ ರಾಜ್ಯದಲ್ಲಿ ಬಂದ್ ವಾತಾವರಣ ಮುಂದುವರೆಸುವ ಸುಳಿವನ್ನು ಸಿಎಂ ಬಿ.ಎಸ್​. ಯಡಿಯೂರಪ್ಪ ಕೊಟ್ಟಿದ್ದಾರೆ.

CM Yediyurappa reaction about coronavirus
ಕೊರೊನಾ ವೈರಸ್ ಕುರಿತು ಸಿಎಂ ಬಿ.ಎಸ್​. ಯಡಿಯೂರಪ್ಪ ಪ್ರತಿಕ್ರಿಯೆ

By

Published : Mar 18, 2020, 12:00 PM IST

ಬೆಂಗಳೂರು: ಕೊರೊನಾ ಹರಡುವಿಕೆಗೆ ಕಡಿವಾಣ ಹಾಕಲು ರಾಜ್ಯದಲ್ಲಿ ಬಂದ್ ವಾತಾವರಣ ಮುಂದುವರೆಸುವ ಸುಳಿವನ್ನು ಸಿಎಂ ಬಿ.ಎಸ್​. ಯಡಿಯೂರಪ್ಪ ಕೊಟ್ಟಿದ್ದಾರೆ.

ಕೊರೊನಾ ವೈರಸ್ ಕುರಿತು ಸಿಎಂ ಬಿ.ಎಸ್​. ಯಡಿಯೂರಪ್ಪ ಪ್ರತಿಕ್ರಿಯೆ

ವಿಧಾನಸೌಧದಲ್ಲಿ ಮಾತನಾಡಿದ ಸಿಎಂ, ಕೊರೊನಾ ವೈರಸ್ ಕುರಿತು ಇವತ್ತು ತುರ್ತು ಸಭೆ ಕರೆದಿದ್ದೇವೆ. ಎಲ್ಲಾ ಚಟುವಟಿಕೆಗಳನ್ನು ಒಂದು ವಾರಗಳ ಕಾಲ ಬಂದ್ ಮಾಡಲಾಗಿದೆ. ಅದನ್ನು ಮುಂದುವರಿಸುವ ಸಾಧ್ಯತೆ ಹೆಚ್ಚಿದೆ. ಈ ಸಂಬಂಧ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಹೋಟೆಲ್​ಗಳಲ್ಲಿ ಕೂಡ ಹೆಚ್ಚು ಜನ ಸೇರಬಾರದು. ಅಮೆರಿಕದಲ್ಲಿ ಅಧ್ಯಕ್ಷ ಟ್ರಂಪ್ ಕೂಡ 10ಕ್ಕಿಂತ ಹೆಚ್ಚು ಜನ ಸೇರಬಾರದು ಅಂತ ಹೇಳಿದ್ದಾರೆ. ನಾವೂ ಕೂಡ ಈ ನಿಟ್ಟಿನಲ್ಲಿ ನಿಯಮಗಳನ್ನು ಇನ್ನಷ್ಟು ಬಿಗಿ ಮಾಡುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

ABOUT THE AUTHOR

...view details