ಬೆಂಗಳೂರು:ನಾಡಿನ ಶ್ರಮಿಕ ಸಮುದಾಯಕ್ಕೆ ಕಾರ್ಮಿಕದ ದಿನದ ಶುಭಾಶಯ ಕೋರಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೊರೊನಾ ನಿಯಂತ್ರಣಕ್ಕಾಗಿ ಜಾರಿಗೆ ತರಲಾಗಿರುವ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರನ್ನು ಮೇಲೆತ್ತುವ ಅಭಯ ನೀಡಿದ್ದಾರೆ.
ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರನ್ನು ಮೇಲೆತ್ತುವೆ: ಕಾರ್ಮಿಕರ ದಿನದಂದು ಸಿಎಂ ಟ್ವೀಟ್ - ಕಾರ್ಮಿಕರಿಗೆ ಸಿಎಂ ಯಡಿಯೂರಪ್ಪ ಶುಭಾಶಯ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾರ್ಮಿಕ ದಿನಾಚರಣೆ ಅಂಗವಾಗಿ ಕಾರ್ಮಿಕರಿಗೆ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.
ಕಾರ್ಮಿಕರಿಗೆ ಸಿಎಂ ಯಡಿಯೂರಪ್ಪ ಶುಭಾಶಯ
ಕರ್ನಾಟಕದ ನನ್ನ ಪ್ರೀತಿಯ ಕಾರ್ಮಿಕ ಬಂಧುಗಳಿಗೆ ಕಾರ್ಮಿಕ ದಿನದ ಹಾರ್ದಿಕ ಶುಭಾಶಯಗಳು. ರಾಜ್ಯದ ಆರ್ಥಿಕ ಚಕ್ರದ ನಿರಂತರ ಚಲನೆಗೆ ನಿಮ್ಮ ದುಡಿಮೆಯೇ ಮೂಲಾಧಾರ. ಈ ಸಂಕಟದ ಸನ್ನಿವೇಶದಿಂದ ನಿಮ್ಮನ್ನು ಮೇಲೆತ್ತಿ ಮತ್ತೊಮ್ಮೆ ಕರುನಾಡನ್ನು ಅಭಿವೃದ್ಧಿಯ ಎತ್ತರಕ್ಕೇರಿಸಲು ನಮ್ಮ ಸರ್ಕಾರ ಕಟಿಬದ್ಧವಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮೂಲಕ ತಿಳಿಸಿದ್ದಾರೆ.
Last Updated : May 1, 2020, 1:45 PM IST