ಕರ್ನಾಟಕ

karnataka

ETV Bharat / city

ಬಜೆಟ್ ಪ್ರತಿಯೊಂದಿಗೆ ವಿಧಾನಸೌಧಕ್ಕೆ ತೆರಳಿದ ಸಿಎಂ - ಆರ್ಥಿಕ ಇಲಾಖೆ ಅಧಿಕಾರಿ ಐಎನ್​ಎಸ್ ಪ್ರಸಾದ್

ಸಿಎಂ ನಿವಾಸ ಕಾವೇರಿಗೆ ಆರ್ಥಿಕ ಇಲಾಖೆ ಅಧಿಕಾರಿ ಐಎನ್​ಎಸ್ ಪ್ರಸಾದ್ ಆಗಮಿಸಿ, ಬಜೆಟ್ ಪ್ರತಿಯನ್ನು ಹೊಂದಿದ್ದ ಸೂಟ್​ಕೇಸ್ ಅನ್ನು ಸಿಎಂ‌ ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿದರು. ಬಜೆಟ್ ಪ್ರತಿಯನ್ನು ಸಂಪ್ರದಾಯದಂತೆ ಸ್ವೀಕಾರ ಮಾಡಿದ ಸಿಎಂ, ನಂತರ ಮಾಧ್ಯಮಗಳಿಗೆ ತೋರಿಸುತ್ತಾ ಸಂತಸ ವ್ಯಕ್ತಪಡಿಸಿದರು.

CM who went vidansouda with a budget copy
ಬಜೆಟ್ ಪ್ರತಿಯೊಂದಿಗೆ ವಿಧಾನಸೌಧಕ್ಕೆ ತೆರಳಿದ ಸಿಎಂ

By

Published : Mar 8, 2021, 11:19 AM IST

Updated : Mar 8, 2021, 12:06 PM IST

ಬೆಂಗಳೂರು:ಆರ್ಥಿಕ ಇಲಾಖೆಯಿಂದ ಬಜೆಟ್ ಪ್ರತಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ವೀಕಾರ ಮಾಡಿದ್ದು, ಬಜೆಟ್ ಪ್ರತಿಯ ಸೂಟ್​​​ಕೇಸ್ ಅನ್ನು ನಗುಮೊಗದೊಂದಿಗೆ ಮಾಧ್ಯಮಗಳತ್ತ ತೋರಿಸಿ ಉತ್ತಮ ಬಜೆಟ್ ನೀಡುವ ವಿಶ್ವಾಸ ವ್ಯಕ್ತಪಡಿಸಿದರು.

ಬಜೆಟ್ ಬಗ್ಗೆ ಸಿಎಂ ಪ್ರತಿಕ್ರಿಯೆ

ಸಿಎಂ ನಿವಾಸ ಕಾವೇರಿಗೆ ಆರ್ಥಿಕ ಇಲಾಖೆ ಅಧಿಕಾರಿ ಐಎನ್​ಎಸ್ ಪ್ರಸಾದ್ ಆಗಮಿಸಿ, ಬಜೆಟ್ ಪ್ರತಿ ಹೊಂದಿದ್ದ ಸೂಟ್​ಕೇಸ್ ಅನ್ನು ಸಿಎಂ‌ ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿದರು. ಬಜೆಟ್ ಪ್ರತಿಯನ್ನು ಸಂಪ್ರದಾಯದಂತೆ ಸ್ವೀಕಾರ ಮಾಡಿದ ಸಿಎಂ, ನಂತರ ಮಾಧ್ಯಮಗಳಿಗೆ ತೋರಿಸುತ್ತ ಸಂತಸ ವ್ಯಕ್ತಪಡಿಸಿದರು.

ಬಜೆಟ್ ಪ್ರತಿಯೊಂದಿಗೆ ವಿಧಾನಸೌಧಕ್ಕೆ ತೆರಳಿದ ಸಿಎಂ

ಈ ವೇಳೆ ಮಾತನಾಡಿದ ಸಿಎಂ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಶುಭಾಶಯ ಕೋರಿದರು. ಮಹಿಳಾ ದಿನ ಮಂಡಿಸುತ್ತಿರುವ ಬಜೆಟ್‌ನಲ್ಲಿ ವಿಶೇಷವಾಗಿ ಮಹಿಳೆಯರಿಗೆ ಆದ್ಯತೆ ನೀಡಿದ್ದೇವೆ. ಸರಿಯಾಗಿ 12.05ಕ್ಕೆ ಬಜೆಟ್ ಮಂಡಿಸುತ್ತೇನೆ.

ಅದಕ್ಕೂ 15 ನಿಮಿಷ ಮೊದಲು ಸಚಿವ ಸಂಪುಟ ಸಭೆ ನಡೆಸಿ ಅನುಮೋದನೆ ಪಡೆಯುತ್ತೇನೆ. ಏನೆಲ್ಲ ಇರಲಿದೆ ಎನ್ನುವುದ ಬಜೆಟ್ ನಲ್ಲಿ ಗೊತ್ತಾಗಲಿದೆ. ಬಜೆಟ್ ಅಂಗವಾಗಿ ಸಚಿವ ಸಂಪುಟದ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ. ಉತ್ತಮ ಬಜೆಟ್ ಮಂಡಿಸುತ್ತೇವೆ ಎಂದರು.

ರಾಘವೇಂದ್ರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಸಿಎಂ

ದೇಗುಲ ಭೇಟಿ:ಬಜೆಟ್ ಪ್ರತಿಯೊಂದಿಗೆ ರಾಘವೇಂದ್ರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಸಿಎಂ, ನಂತರ ವಿಧಾನಸೌಧಕ್ಕೆ ತೆರಳಿದರು.

Last Updated : Mar 8, 2021, 12:06 PM IST

For All Latest Updates

TAGGED:

ABOUT THE AUTHOR

...view details