ಬೆಂಗಳೂರು: ಜಿಎಸ್ಟಿ ಮಂಡಳಿ ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆ ಸಂಜೆ ಚಂಡೀಗಢಕ್ಕೆ ತೆರಳಿದ್ದಾರೆ. ಜೂನ್ 28 ಹಾಗೂ 29 ರಂದು ನಡೆಯಲಿರುವ 47ನೇ ಜಿ.ಎಸ್.ಟಿ. ಕೌನ್ಸಿಲ್ ಸಭೆಯಲ್ಲಿ ಸಿಎಂ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಜಿಎಸ್ಟಿ ಕುರಿತು ಸಮಗ್ರ ಚರ್ಚೆ ನಡೆಯಲಿದೆ.
ಜಿಎಸ್ಟಿ ಮಂಡಳಿ ಸಭೆ: ಚಂಡೀಗಢಕ್ಕೆ ತೆರಳಿದ ಸಿಎಂ - GST Board Meeting
ಜೂನ್ 28 ಹಾಗೂ 29 ರಂದು ನಡೆಯಲಿರುವ 47ನೇ ಜಿ.ಎಸ್.ಟಿ. ಕೌನ್ಸಿಲ್ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸುತ್ತಿದ್ದು, ನಿನ್ನೆ ಸಂಜೆ ಚಂಡೀಗಢಕ್ಕೆ ತೆರಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಜಿಎಸ್ಟಿ ತೆರಿಗೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಗ್ರೂಪ್ ಆಫ್ ಮಿನಿಸ್ಟರ್ ಸಭೆ ಈಗಾಗಲೇ 3 ಬಾರಿ ನಡೆದಿದೆ. ಈ ಕುರಿತು ಮಧ್ಯಂತರ ವರದಿಯನ್ನು ಸಲ್ಲಿಸುವ ನಿರೀಕ್ಷೆ ಇದೆ. ಎರಡು ದಿನಗಳ ಸಭೆಯ ನಂತರ ಜೂನ್ 30 ರಂದು ಸಿಎಂ ಬೊಮ್ಮಾಯಿ ಅವರು ನಗರಕ್ಕೆ ಹಿಂತಿರುಗಲಿದ್ದಾರೆ.
ಇದನ್ನೂ ಓದಿ :ವಿದ್ಯುತ್ ಕಂಪನಿಗಳ ಸುಧಾರಣೆ, ಏಕಸದಸ್ಯ ಸಮಿತಿ ಅವಧಿ ಮುಂದುವರಿಕೆ : ಮುಖ್ಯಮಂತ್ರಿ ಸೂಚನೆ