ಕರ್ನಾಟಕ

karnataka

ETV Bharat / city

ಸಂಪುಟ ಸಂಕಷ್ಟದ ನಡುವೆಯೂ ವೈಲ್ಡ್ ಕರ್ನಾಟಕ ಡಾಕ್ಯುಮೆಂಟರಿ ವೀಕ್ಷಣೆ ಮಾಡಲಿರವ ಸಿಎಂ! - ಅರಣ್ಯ ಸಚಿವರಾದ ಸಿ.ಸಿ. ಪಾಟೀಲ್

ಸಚಿವ ಸಂಪುಟ ವಿಸ್ತರಣೆ, ವಿಧಾನ ಪರಿಷತ್ ಉಪ ಚುನಾವಣಾ ಟಿಕೆಟ್ ಹಂಚಿಕೆ ಒತ್ತಡದ ನಡುವೆಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಜೆ ವನ್ಯಜೀವಿ ಸಾಕ್ಷ್ಯಚಿತ್ರ ನೋಡಲು ಥಿಯೇಟರ್​​​ಗೆ ತೆರಳುತ್ತಿದ್ದಾರೆ‌.

KN_BNG_03_CM_FILM_WATCHING_SCRIPT_9021933
ಸಂಪುಟ ಸಂಕಷ್ಟದ ನಡುವೆಯೂ ವೈಲ್ಡ್ ಕರ್ನಾಟಕ ಚಿತ್ರ ವೀಕ್ಷಣೆ ಮಾಡಲಿರವ ಸಿಎಂ!

By

Published : Jan 28, 2020, 12:21 PM IST

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ, ವಿಧಾನ ಪರಿಷತ್ ಉಪ ಚುನಾವಣಾ ಟಿಕೆಟ್ ಹಂಚಿಕೆ ಒತ್ತಡದ ನಡುವೆಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಜೆ ವನ್ಯಜೀವಿ ಸಾಕ್ಷ್ಯಚಿತ್ರ ನೋಡಲು ಥಿಯೇಟರ್​​ಗೆ ತೆರಳುತ್ತಿದ್ದಾರೆ‌.

ಕರ್ನಾಟಕದ ವನ್ಯಜೀವಿಗಳ ಕುರಿತಾಗಿ ನಿರ್ಮಿಸಿರುವ ವೈಲ್ಡ್ ಕರ್ನಾಟಕ ಡಾಕ್ಯುಮೆಂಟರಿ ಚಿತ್ರವನ್ನು ಇಂದು ಸಂಜೆ 5-45ಕ್ಕೆ ಸಿಎಂ ವೀಕ್ಷಿಸಲಿದ್ದಾರೆ. ರಾಜಾಜಿನಗರದ ಓರಾಯನ್ ಮಾಲ್​​ನಲ್ಲಿರುವ ಪಿವಿಆರ್ ಚಿತ್ರಮಂದಿರದಲ್ಲಿ ಸಿಎಂ ಚಿತ್ರ ವೀಕ್ಷಣೆ ಮಾಡಲಿದ್ದು, ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್​​ ನಾರಾಯಣ, ಅರಣ್ಯ ಸಚಿವರಾದ ಸಿ.ಸಿ.ಪಾಟೀಲ್ ಹಾಗೂ ನಟ ಯಶ್ ಕೂಡ ಸಿಎಂ ಜೊತೆ ಸಿನಿಮಾ ವೀಕ್ಷಣೆ ಮಾಡಲಿದ್ದಾರೆ.

ಭಾರತದ ಇತಿಹಾಸದಲ್ಲಿ ಇದೇ ಮೊದಲ‌ ಬಾರಿಗೆ ರಾಜ್ಯವೊಂದರ ವನ್ಯಜೀವಿಗಳ ಕುರಿತು ಆಂಗ್ಲ ಅವತರಣಿಕೆಯ ಸಾಕ್ಷ್ಯಚಿತ್ರ ಇದಾಗಿದ್ದು, ಅರಣ್ಯ ಇಲಾಖೆ ಸಹಯೋಗದಲ್ಲಿ‌ ಚಿತ್ರವನ್ನು ನಿರ್ಮಿಸಲಾಗಿದೆ.

ABOUT THE AUTHOR

...view details