ಬೆಂಗಳೂರು: ಉತ್ತರ ಕರ್ನಾಟಕದ ನೆರೆಪೀಡಿತ ಪ್ರದೇಶಗಳ ವೀಕ್ಷಣೆ ನಂತರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಕರಾವಳಿ ಪ್ರದೇಶದ ನೆರೆ ವೀಕ್ಷಣೆಗೆ ತೆರಳುತ್ತಿದ್ದಾರೆ.
ಇಂದು ಉಡುಪಿ-ಮಂಗಳೂರಿಗೆ ಸಿಎಂ ಭೇಟಿ: ನೆರೆ ಹಾನಿ ವೀಕ್ಷಣೆ - CM Yediyurappa news
ಉತ್ತರ ಕರ್ನಾಟಕದ ನೆರೆಪೀಡಿತ ಪ್ರದೇಶಗಳ ವೀಕ್ಷಣೆ ನಂತರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಕರಾವಳಿ ಪ್ರದೇಶದ ನೆರೆ ವೀಕ್ಷಣೆಗೆ ತೆರಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ
ಮೂರು ದಿನಗಳ ಉತ್ತರ ಕರ್ನಾಟಕ ನೆರೆ ವೀಕ್ಷಿಸಿ ಹಿಂದಿರುಗಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಧಿಕಾರಿಗಳ ಸಭೆ ನಡೆಸಿದರು. ನಂತರ ಕೊಡಗು ಜಿಲ್ಲೆಯ ಮಳೆಹಾನಿ ವೀಕ್ಷಣೆಗೆ ತೆರಳಲು ಮುಂದಾದರು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಹೆಲಿಕಾಪ್ಟರ್ ಪ್ರಯಾಣಕ್ಕೆ ಅನುಮತಿ ಸಿಗದ ಕಾರಣ ಪ್ರವಾಸ ರದ್ದುಗೊಳಿಸಿದರು.
ಇಂದು ಬೆಳಗ್ಗೆ 8.30 ಕ್ಕೆ ಮಂಗಳೂರಿಗೆ ತೆರಳಲಿರುವ ಸಿಎಂ ಅಲ್ಲಿ ನೆರೆ ವೀಕ್ಷಣೆ ಮಾಡಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಬಳಿಕ ಉಡುಪಿಯಲ್ಲಿಯೂ ನೆರೆ ಪ್ರದೇಶಕ್ಕೆ ಭೇಟಿ ನೀಡಿ ನಂತರ ಅಧಿಕಾರಿಗಳ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.