ಬೆಂಗಳೂರು :ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ 11 ಜಿಲ್ಲೆಗಳ ಜಿಲ್ಲಾಡಳಿತದೊಂದಿಗೆ ಅಕ್ಟೋಬರ್ 8ರಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಡಿಯೋ ಸಂವಾದ ನಡೆಸಲಿದ್ದಾರೆ. ಕೊರೊನಾ ನಿಯಂತ್ರಣ ಕುರಿತ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.
ಅ.8ಕ್ಕೆ 11 ಜಿಲ್ಲೆಗಳ ಜಿಲ್ಲಾಡಳಿತದ ಜತೆ ಸಿಎಂ ವಿಡಿಯೋ ಸಂವಾದ.. - ಕೊರೊನಾ ನಿಯಂತ್ರಣ ಕುರಿತ ಕ್ರಮ
ಕೊರೊನಾ ಹರಡುವಿಕೆ ಪ್ರಮಾಣ, ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮ, ಆಸ್ಪತ್ರೆಗಳಲ್ಲಿನ ಚಿಕಿತ್ಸಾ ಸೌಲಭ್ಯ, ವೆಂಟಿಲೇಟರ್, ಆ್ಯಕ್ಸಿಜನ್, ಬೆಡ್‌ಗಳ ಸಂಖ್ಯೆ, ಮರಣದ ಪ್ರಮಾಣ ಸೇರಿ ಸಂಪೂರ್ಣ ವಿವರ ಪಡೆದು ಅಗತ್ಯ ಸಲಹೆ ಸೂಚನೆ ನೀಡಲಿದ್ದಾರೆ..
![ಅ.8ಕ್ಕೆ 11 ಜಿಲ್ಲೆಗಳ ಜಿಲ್ಲಾಡಳಿತದ ಜತೆ ಸಿಎಂ ವಿಡಿಯೋ ಸಂವಾದ.. CM Video Conversation with 11 Districts because corona issue](https://etvbharatimages.akamaized.net/etvbharat/prod-images/768-512-9070071-822-9070071-1601978093296.jpg)
ಗೃಹ ಕಚೇರಿ ಕೃಷ್ಣಾದಿಂದ ಬಳ್ಳಾರಿ, ದಕ್ಷಿಣಕನ್ನಡ, ಹಾಸನ, ಧಾರವಾಡ, ಬೆಳಗಾವಿ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ, ಉತ್ತರಕನ್ನಡ ಹಾಗೂ ಬೆಂಗಳೂರು ನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳೊಂದಿಗೆ ಸಿಎಂ ವಿಡಿಯೋ ಸಂವಾದ ನಡೆಸಲಿದ್ದಾರೆ.
ಕೊರೊನಾ ಹರಡುವಿಕೆ ಪ್ರಮಾಣ, ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮ, ಆಸ್ಪತ್ರೆಗಳಲ್ಲಿನ ಚಿಕಿತ್ಸಾ ಸೌಲಭ್ಯ, ವೆಂಟಿಲೇಟರ್, ಆ್ಯಕ್ಸಿಜನ್, ಬೆಡ್‌ಗಳ ಸಂಖ್ಯೆ, ಮರಣದ ಪ್ರಮಾಣ ಸೇರಿ ಸಂಪೂರ್ಣ ವಿವರ ಪಡೆದು ಅಗತ್ಯ ಸಲಹೆ ಸೂಚನೆ ನೀಡಲಿದ್ದಾರೆ. ಅನ್ಲಾಕ್ ಪ್ರಕ್ರಿಯೆ ಮುಂದುವರೆದಿದ್ದು, ಇನ್ನಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕೊರೊನಾ ಪಾಸಿಟಿವ್ ಪ್ರಕರಣ ಸಂಖ್ಯೆ ಕಡಿಮೆ ಮಾಡಲು ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಿದ್ದಾರೆ.