ಬೆಂಗಳೂರು: ಉಪಸಮರದಲ್ಲಿ ಬ್ಯುಸಿಯಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಪೂರ್ತಿ ದಿನ ಕಡತ ವಿಲೇವಾರಿ ಕಾರ್ಯದಲ್ಲಿ ತೊಡಗಲಿದ್ದಾರೆ.
ಕಳೆದ ಎರಡು ವಾರದಿಂದ ಉಪಚುನಾವಣೆ ಪ್ರಚಾರ, ಜಿಲ್ಲಾ ಪ್ರವಾಸಗಳಲ್ಲಿ ತೊಡಗಿದ್ದ ಸಿಎಂ ಬೊಮ್ಮಾಯಿಗೆ ಕಡತ ವಿಲೇವಾರಿ ಸಾಧ್ಯವಾಗಿರಲಿಲ್ಲ. ಸಿಎಂ ಕಚೇರಿಯಲ್ಲಿ ಸಾಕಷ್ಟು ಕಡತಗಳು ಸಹಿ ಆಗದೆ ಹಾಗೇ ಉಳಿದುಕೊಂಡಿದ್ದವು. ಹೀಗಾಗಿ ಇಂದು ಸಿಎಂ ತಮ್ಮ ದಿನದ ವೇಳಾಪಟ್ಟಿಯಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಿಗದಿಪಡಿಸಿಲ್ಲ. ಇಂದು ಇಡೀ ದಿನ ಕಾಯ್ದಿರಿಸಿರುವ ಬೊಮ್ಮಾಯಿ ಬಹುತೇಕ ಸಮಯವನ್ನು ಕಡತ ವಿಲೇವಾರಿಗೆ ಮೀಸಲಿರಿಸಲಿದ್ದಾರೆ.
ಬಹಳ ದಿನಗಳಿಂದ ಕಡತಗಳ ವಿಲೇವಾರಿ ಕೆಲಸ ಬಾಕಿ ಇತ್ತು. ಇದರಿಂದ ಆಡಳಿತಾತ್ಮಕ ಕೆಲಸ ಕಾರ್ಯಗಳಿಗೆ ತೊಡಕಾಗಿತ್ತು. ಇತ್ತ ಆಡಳಿತ ಮರೆತು ಉಪಸಮರದಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಪ್ರತಿಪಕ್ಷಗಳು ತಮ್ಮ ಆಕ್ರೋಶ ಹೊರಹಾಕಿದ್ದವು. ವಿಧಾನಸೌಧಕ್ಕೆ ಬೀಗ ಹಾಕಲಾಗಿದೆ ಎಂದು ಕಿಡಿಕಾರಿದ್ದರು.
ಕಳೆದ ಎರಡು ವಾರಗಳಿಂದ ಉಪಸಮರ, ಜಿಲ್ಲಾ ಪ್ರವಾಸದಲ್ಲೇ ಸಿಎಂ ಬೊಮ್ಮಾಯಿ ಬ್ಯುಸಿಯಾಗಿದ್ದರು. ಹೀಗಾಗಿ ಸಿಎಂ ಕಚೇರಿಯಲ್ಲಿ ಕಡತ ವಿಲೇವಾರಿಯಾಗದೆ ರಾಶಿ ಬಿದ್ದಿವೆ. ಈ ಹಿನ್ನೆಲೆ ಇಂದು ತಮ್ಮ ದಿನದ ಬಹುತೇಕ ಸಮಯವನ್ನು ಸಿಎಂ ಕಡತ ವಿಲೇವಾರಿಗೆ ಮೀಸಲಿಟ್ಟಿದ್ದಾರೆ.
ಇದನ್ನೂ ಓದಿ:ವೃದ್ಧಾಶ್ರಮದಲ್ಲಿ ದೀಪಾವಳಿ ಸಂಭ್ರಮ.. ಹುಬ್ಬಳ್ಳಿಯ ಮಂಜುನಾಥ ಎಂಟ್ರೂವಿ ಕುಟುಂಬಸ್ಥರ ಸೇವೆಗೆ ಮೆಚ್ಚುಗೆ