ಕರ್ನಾಟಕ

karnataka

ETV Bharat / city

ಹೊನ್ನಾಳಿ ಕ್ಷೇತ್ರಕ್ಕೆ 25 ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ತಕ್ಷಣ ಮಂಜೂರು ಮಾಡಿದ ಸಿಎಂ - ಹೊನ್ನಾಳಿ ಶಾಸಕ, ಸಿ.ಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ

ನನ್ನ ಮತ ಕ್ಷೇತ್ರದ ಕೋವಿಡ್ ಸೋಂಕಿತ ಬಂಧುಗಳ ಜೀವ ರಕ್ಷಣೆಗೆ ತುರ್ತಾಗಿ ಬಾಡಿಗೆ ವಾಹನ ಮಾಡಿಸಿ 25 ಆಮ್ಲಜನಕ ಸಾಂದ್ರಕಗಳನ್ನು ಲೋಡ್ ಮಾಡಿಸಲು ನನ್ನ ಆಪ್ತ ಸಹಾಯಕರಿಗೆ ಸೂಚಿಸಿದೆನು..

oxygen concentration machines to Honnali
ಹೊನ್ನಾಳಿ ಕ್ಷೇತ್ರಕ್ಕೆ 25 ಆಮ್ಲಜನಕ ಸಾಂದ್ರತ ಯಂತ್ರ

By

Published : May 22, 2021, 10:32 PM IST

ಬೆಂಗಳೂರು :ಮುಖ್ಯಮಂತ್ರಿಗಳ ಗೃಹ ಕಚೇರಿ ಕಾವೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿ ಮಾಡಿದ ಹೊನ್ನಾಳಿ ಶಾಸಕ, ಸಿ.ಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಸ್ವಕ್ಷೇತ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಸರ್ಕಾರಿ ಆಸ್ಪತ್ರೆಗಳಿಗೆ ಕೋವಿಡ್ ನಿರ್ವಹಣೆಗಾಗಿ 10 ವೆಂಟಿಲೇಟರ್ ಹಾಗೂ ಹೆಚ್ಚುವರಿಯಾಗಿ 25 ಆಮ್ಲಜನಕ ಸಾಂದ್ರಕಗಗಳಿಗಾಗಿ ಮನವಿ ಸಲ್ಲಿಸಿದ್ದರು.

ಓದಿ: 18-44 ವಯೋಮಾನದವರಿಗೆ ಲಸಿಕೆ ಲಭ್ಯವಿಲ್ಲ.. ಗೊಂದಲಕ್ಕೆ ಆರೋಗ್ಯ ಇಲಾಖೆ ತೆರೆ.. NHM ಸ್ಪಷ್ಟ ಮಾಹಿತಿ

ಮನವಿಗೆ ತಕ್ಷಣ ಸ್ಪಂದಿಸಿದಿರುವ ಮಾನ್ಯ ಮುಖ್ಯಮಂತ್ರಿ 25 ಆಮ್ಲಜನಕ ಸಾಂದ್ರತೆಗಳನ್ನು ಮಂಜೂರು ಮಾಡಿದರು. ನನ್ನ ಮತ ಕ್ಷೇತ್ರದ ಕೋವಿಡ್ ಸೋಂಕಿತ ಬಂಧುಗಳ ಜೀವ ರಕ್ಷಣೆಗೆ ತುರ್ತಾಗಿ ಬಾಡಿಗೆ ವಾಹನ ಮಾಡಿಸಿ 25 ಆಮ್ಲಜನಕ ಸಾಂದ್ರಕಗಳನ್ನು ಲೋಡ್ ಮಾಡಿಸಲು ನನ್ನ ಆಪ್ತ ಸಹಾಯಕರಿಗೆ ಸೂಚಿಸಿದೆನು ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.

ಈಗಾಗಲೇ 18 ಹಾಗೂ ಇಂದು 25 ಆಮ್ಲಜನಕ ಸಾಂದ್ರಕಗಳನ್ನು ನನ್ನ ಮತಕ್ಷೇತ್ರದ ಕೋವಿಡ್ ನಿರ್ವಹಣೆಗೆ ನೀಡಿದ ಮುಖ್ಯಮಂತ್ರಿಗಳಿಗೆ ಅವಳಿ ತಾಲೂಕಿನ ಜನತೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನ ಅರ್ಪಿಸುತ್ತೇನೆ ಎಂದೂ ಹೇಳಿದ್ದಾರೆ.

ABOUT THE AUTHOR

...view details