ಕರ್ನಾಟಕ

karnataka

ETV Bharat / city

ಸಿಎಂ ಪರಿಹಾರ ನಿಧಿ ಕೋವಿಡ್-19 ಖಾತೆಗೆ ಬರೋಬ್ಬರಿ 127.37 ಕೋಟಿ ರೂ.‌ ಜಮೆ! - ಸಿಎಂ ಪರಿಹಾರ ನಿಧಿ ಕೋವಿಡ್-19 ಖಾತೆ

ಕೊರೊನಾ ವೈರಸ್​​ ಮುಕ್ತ ಮಾಡಲು ಮುಖ್ಯಮಂತ್ರಿ ಪರಿಹಾರ ನಿಧಿಗೆ ನಟ, ನಟಿಯರು, ಸಂಘ-ಸಂಸ್ಥೆಗಳು, ಸಾರ್ವಜನಿಕರಿಂದ ದೇಣಿಗೆಯ ಮಹಾಪೂರವೇ ಹರಿದು ಬರುತ್ತಿದೆ.

CM Relief Fund
ಸಿಎಂ ಪರಿಹಾರ ನಿಧಿ

By

Published : Apr 9, 2020, 11:06 PM IST

ಬೆಂಗಳೂರು:ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ರಾಜ್ಯದ ಜನರು ಮುಕ್ತ ಮನಸ್ಸಿನಿಂದ ನೆರವಿನ ಹಸ್ತವನ್ನು ನೀಡುತ್ತಿದ್ದಾರೆ.

ಸಿಎಂ ಪರಿಹಾರ ನಿಧಿ ಕೋವಿಡ್-19 ಖಾತೆಗೆ ದೇಣಿಗೆಯ ಮಹಾಪೂರವೇ ಹರಿದು ಬರುತ್ತಿದೆ. ಈವರೆಗೆ 127.37 ಕೋಟಿ ರೂ. ಜಮೆಯಾಗಿದೆ.

ಮಾ.23 ರಿಂದ ಏ.8ರ ವರೆಗೆ 103.31 ಕೋಟಿ ರೂ. ಸಿಎಂ ಪರಿಹಾರ ನಿಧಿ ಖಾತೆಯಲ್ಲಿ ಜಮೆಯಾಗಿದೆ. ಏ.9ರಂದು 24.06 ಕೋಟಿ ರೂ. ಮೊತ್ತದ ಚೆಕ್ ಅನ್ನು ಸ್ವೀಕರಿಸಲಾಗಿದೆ.

ಸಿ.ಎಂ.ಯಡಿಯೂರಪ್ಪ ಕೋವಿಡ್-19 ಹೋರಾಟಕ್ಕೆ ಸಹಾಯಹಸ್ತ ನೀಡುವಂತೆ ಕರೆ ನೀಡಿದ ಹಿನ್ನೆಲೆ ಕೈಗಾರಿಕೋದ್ಯಮಿಗಳು, ನಟ, ನಟಿಯರು, ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ಮುಕ್ತ ಮನಸ್ಸಿನಿಂದ ದೇಣಿಗೆ ನೀಡುತ್ತಿದ್ದಾರೆ.

ABOUT THE AUTHOR

...view details