ಕರ್ನಾಟಕ

karnataka

ETV Bharat / city

ನಂದೀಶ್ ರೆಡ್ಡಿಗೆ ಬಿಎಂಟಿಸಿ ಅಧ್ಯಕ್ಷ ಸ್ಥಾನ ನೀಡಿ ಸಿಎಂ ಆದೇಶ - ಮಾಜಿ ಶಾಸಕ ನಂದೀಶ್ ರೆಡ್ಡಿಗೆ ಬಿಎಂಟಿಸಿ‌ ಅಧ್ಯಕ್ಷ ಸ್ಥಾನ

ಉಪ ಚುನಾವಣೆಯಲ್ಲಿ ಕೆ ಆರ್ ಪುರಂ ಟಿಕೆಟ್ ಆಕಾಂಕ್ಷಿಯ ಬಂಡಾಯ ಶಮನಕ್ಕೆ ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಜಿ ಶಾಸಕ ನಂದೀಶ್ ರೆಡ್ಡಿಗೆ ಬಿಎಂಟಿಸಿ‌ ಉಪಾಧ್ಯಕ್ಷ ಸ್ಥಾನದ ಬದಲು ಅಧ್ಯಕ್ಷ ಸ್ಥಾನ ನೀಡಿ ಆದೇಶ ಹೊರಡಿಸಿದ್ದಾರೆ.

BMTC

By

Published : Oct 17, 2019, 12:57 PM IST

ಬೆಂಗಳೂರು: ಉಪ ಚುನಾವಣೆಯಲ್ಲಿ ಕೆ ಆರ್ ಪುರಂ ಟಿಕೆಟ್ ಆಕಾಂಕ್ಷಿಯ ಬಂಡಾಯ ಶಮನಕ್ಕೆ ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಜಿ ಶಾಸಕ ನಂದೀಶ್ ರೆಡ್ಡಿಗೆ ಬಿಎಂಟಿಸಿ‌ ಉಪಾಧ್ಯಕ್ಷ ಸ್ಥಾನದ ಬದಲು ಅಧ್ಯಕ್ಷ ಸ್ಥಾನ ನೀಡಿ ಆದೇಶ ಹೊರಡಿಸಿದ್ದಾರೆ.

ನಂದೀಶ್ ರೆಡ್ಡಿಗೆ ಅಧ್ಯಕ್ಷ ಸ್ಥಾನ ನೀಡಿ ಆದೇಶ

ಕೆಲ ದಿನಗಳ ಹಿಂದೆ ಮಾಜಿ ಶಾಸಕ ನಂದೀಶ್ ರೆಡ್ಡಿಯನ್ನು ಬಿಎಂಟಿಸಿ ಉಪಾಧ್ಯಕ್ಷರಾಗಿ ನೇಮಕಗೊಳಿಸಲಾಗಿತ್ತು. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ಒಪ್ಪದ ಪರಾಜಿತ ಅಭ್ಯರ್ಥಿ ನಂದೀಶ್ ರೆಡ್ಡಿ ಅಧಿಕಾರ ಸ್ವೀಕಾರ ಮಾಡಿರಲಿಲ್ಲ ಹೀಗಾಗಿ ಈಗ ಬಿಎಂಟಿಸಿ ಅಧ್ಯಕ್ಷರಾಗಿ ಮಾಜಿ ಶಾಸಕ ಎನ್ ಎಸ್ ನಂದೀಶ್ ರೆಡ್ಡಿ ನೇಮಕ ಮಾಡಿ ಸಿಎಂ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

ಈಗಿನಿಂದ ಮುಂದಿನ ಆದೇಶದವರೆಗೆ ಬಿಎಂಟಿಸಿ ಅಧ್ಯಕ್ಷ ಸ್ಥಾನ ನೀಡಿ ಆದೇಶ ಹೊರಡಿಸಲಾಗಿದೆ.ಇದಕ್ಕೆ ನಂದೀಶ್ ರೆಡ್ಡಿ ಒಪ್ಪುವ ಸಾಧ್ಯತೆ ಇದ್ದು, ಅನರ್ಹ ಶಾಸಕ ಬಿ ಎ ಬಸವರಾಜ್ ಹಾದಿ ಸುಗಮವಾದಂತಾಗಿದೆ.

ABOUT THE AUTHOR

...view details