ಕರ್ನಾಟಕ

karnataka

ETV Bharat / city

ಖಾಸಗಿ ಮೆಡಿಕಲ್ ಕಾಲೇಜು ಮುಖ್ಯಸ್ಥರ ಜೊತೆ ಸಿಎಂ ಮಹತ್ವದ ಸಭೆ - ಸಿಎಂ ಯಡಿಯೂರಪ್ಪ ಸಭೆ

ಖಾಸಗಿ ಮೆಡಿಕಲ್ ಕಾಲೇಜು ಮುಖ್ಯಸ್ಥರ ಜೊತೆ ಸಭೆ ನಡೆಸಿರುವ ಸಿಎಂ, ಈ ಹಿಂದೆ ಶೇ.50 ರಷ್ಟು ಬೆಡ್​ಗಳನ್ನು ಕೊಡುವುದಾಗಿ ಸಮ್ಮತಿ ಸೂಚಿಸಿದ್ದ ಮೆಡಿಕಲ್​ ಕಾಲೇಜುಗಳು ಈ ವರೆಗೆ 4500 ಹಾಸಿಗೆಗಳನ್ನು ಮಾತ್ರ ನೀಡಿದ್ದು, ಈ ಕುರಿತು ಚರ್ಚೆ ನಡೆಸುತ್ತಿದ್ದಾರೆ.

cm-meeting-with-heads-of-private-medical-college
ಸಿಎಂ ಮಹತ್ವದ ಸಭೆ

By

Published : Jul 18, 2020, 6:29 PM IST

ಬೆಂಗಳೂರು: ಗೃಹ ಕಚೇರಿ ಕೃಷ್ಣಾದಲ್ಲಿ ಖಾಸಗಿ ಮೆಡಿಕಲ್ ಕಾಲೇಜು ಮುಖ್ಯಸ್ಥರ ಜೊತೆ ಸಿಎಂ ಬಿ. ಎಸ್​. ಯಡಿಯೂರಪ್ಪನವರು ಸಭೆ ನಡೆಸಿದ್ದಾರೆ.

ಈ ಮುಂಚೆ ಒಟ್ಟು 4500 ಬೆಡ್​ಗಳನ್ನು ಕೊಡಲು ಮೆಡಿಕಲ್ ಕಾಲೇಜುಗಳು ಒಪ್ಪಿಕೊಂಡಿದ್ದವು. 18 ದಿನಗಳ ಹಿಂದೆ ನಡೆದ ಸಿಎಂ ಸಭೆಯಲ್ಲಿ ಶೇ.50 ರಷ್ಟು ಬೆಡ್​ಗಳನ್ನು ಕೊಡುವುದಾಗಿ ಮೆಡಿಕಲ್ ಕಾಲೇಜುಗಳು ಸಮ್ಮತಿ ಸೂಚಿಸಿದ್ದರು. ಆದರೆ ಈವರೆಗೆ 4500 ಬೆಡ್​ಗಳ ಪೈಕಿ ಸುಮಾರು 750 ಹಾಸಿಗೆಗಳನ್ನಷ್ಟೇ ಕೊಟ್ಟಿದ್ದಾರೆ. ಈ ಹಿನ್ನೆಲೆ ಖಾಸಗಿ ಮೆಡಿಕಲ್ ಕಾಲೇಜುಗಳ ಜೊತೆ ಸಿಎಂ ಸಭೆ ನಡೆಸಿ ಚರ್ಚೆ ನಡೆಸುತ್ತಿದ್ದಾರೆ.

ಖಾಸಗಿ ಮೆಡಿಕಲ್ ಕಾಲೇಜು ಮುಖ್ಯಸ್ಥರ ಜೊತೆ ಸಿಎಂ ಮಹತ್ವದ ಸಭೆ

ಈಗಾಗಲೇ ಸಿಎಂ ವಿಧಾನಸೌಧದಲ್ಲಿ ಮೆಡಿಕಲ್ ಕಾಲೇಜುಗಳ ಜೊತೆ ಸಭೆ ನಡೆಸಿದ್ದರು. ಆ ಸಂದರ್ಭ ಹಾಸಿಗೆ ಬಿಟ್ಟು ಕೊಡುವುದಾಗಿ ಒಪ್ಪಿಕೊಂಡಿದ್ದರು. ಆದರೆ ಈಗ ಹಾಸಿಗೆ ಬಿಟ್ಟು ಕೊಡಲು ಖಾಸಗಿ ಮೆಡಿಕಲ್ ಕಾಲೇಜುಗಳು ಹಿಂದೇಟು ಹಾಕುತ್ತಿದ್ದಾರೆ. ಈ ಸಂಬಂಧ ಸಚಿವರುಗಳು ಈಗಾಗಲೇ ಮೆಡಿಕಲ್ ಕಾಲೇಜುಗಳ ಜೊತೆ ಸಭೆ ನಡೆಸಿದ್ದರು. ಆದರೂ ಸಮಸ್ಯೆ ಬಗೆಹರಿಯದ ಕಾರಣ ಇದೀಗ ಸಿಎಂ ಖುದ್ದು ಖಾಸಗಿ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ.

ಖಾಸಗಿ ಮೆಡಿಕಲ್ ಕಾಲೇಜುಗಳ ಸಮಸ್ಯೆ, ಟೆಸ್ಟಿಂಗ್ ಲ್ಯಾಬ್ ಮಾಡುವಲ್ಲಿನ ವಿಳಂಬ, ಹಾಸಿಗೆ ನೀಡುವಲ್ಲಿನ ವಿಳಂಬ, ಸಿಬ್ಬಂದಿ ಕೊರತೆ ಎಲ್ಲದರ ಬಗ್ಗೆ ಸಿಎಂ ಚರ್ಚೆ ನಡೆಸಲಿದ್ದಾರೆ.

ಸಭೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಡಿಸಿಎಂ ಅಶ್ವಥ ನಾರಾಯಣ, ಸಚಿವ ಆರ್. ಅಶೋಕ್, ಸಿಎಸ್ ವಿಜಯ್ ಭಾಸ್ಕರ್, ಸಂಸದ ತೇಜಸ್ವಿ ಸೂರ್ಯ ಪಾಲ್ಗೊಂಡಿದ್ದಾರೆ.

11 ಖಾಸಗಿ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಬಿಜಿಎಸ್‌ ಗ್ಲೋಬಲ್‌ ಇನ್​​ಸ್ಟಿಟ್ಯೂಟ್‌ ಆಫ್ ಮೆಡಿಕಲ್ ಸೈನ್ಸ್, ಡಾ. ಬಿ.ಆರ್‌. ಅಂಬೇಡ್ಕರ್‌ ಮೆಡಿಕಲ್ ಕಾಲೇಜು, ಈಸ್ಟ್‌ ಪಾಯಿಂಟ್ ಮೆಡಿಕಲ್ ಕಾಲೇಜು, ಕೆಂಪೇಗೌಡ ಇನ್​​ಸ್ಟಿಟ್ಯೂಟ್ ಆಫ್ ಮೆಡಿಕಲ್ ಕಾಲೇಜು, ಎಂಎಸ್‌ ರಾಮಯ್ಯ ಮೆಡಿಕಲ್ ಕಾಲೇಜು, ಎಂವಿಜೆ ಮೆಡಿಕಲ್ ಕಾಲೇಜು, ಸಪ್ತಗಿರಿ ಮೆಡಿಕಲ್ ಕಾಲೇಜು, ಸೈಂಟ್ ಜಾನ್‌ ಮೆಡಿಕಲ್ ಕಾಲೇಜು, ಆಕಾಶ್ ಮೆಡಿಕಲ್ ಕಾಲೇಜು, ದಿ ಆಕ್ಸ್​ಫರ್ಡ್‌ ಮೆಡಿಕಲ್ ಕಾಲೇಜು, ವೈದೇಹಿ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರು ಭಾಗಿಯಾಗಿದ್ದಾರೆ.

ABOUT THE AUTHOR

...view details