ಕರ್ನಾಟಕ

karnataka

ETV Bharat / city

'ಅವನು ಹೇಳಿದ್ದೇ ವೇದವಾಕ್ಯವಲ್ಲ, ಯಾರೂ ರಾಜೀನಾಮೆ ನೀಡಬೇಕಿಲ್ಲ': ಸಿದ್ದು ವಿರುದ್ಧ ಸಿಎಂ ಗರಂ - ಸಿಎಂ ಬಸವರಾಜ ಬೊಮ್ಮಾಯಿ ಸುದ್ದಿ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಪ್ರಸಂಗ ನಡೆಯಿತು.

CM Bommai lashed out against Siddaramaiah  CM lashed out against Siddaramaiah over BJP minister resignation issue  CM Basavaraj Bommai news  Congress leader Siddaramaiah news  ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಬೊಮ್ಮಾಯಿ  ಬಿಜೆಪಿ ಸಚಿವರ ರಾಜೀನಾಮೆ ವಿಚಾರವಾಗಿ ಸಿದ್ದರಾಮಯ್ಯ ವಿರುದ್ಧ ಸಿಎಂ ವಾಗ್ದಾಳಿ  ಸಿಎಂ ಬಸವರಾಜ ಬೊಮ್ಮಾಯಿ ಸುದ್ದಿ  ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಸುದ್ದಿ
ಸಿಎಂ ವಾಗ್ದಾಳಿ

By

Published : Jul 29, 2022, 1:27 PM IST

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಆರೋಪಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಏಕವಚನದಲ್ಲಿ ತಿರುಗೇಟು ನೀಡಿದ್ದು, "ಅವನು ಹೇಳಿದ್ದೇ ವೇದವಾಕ್ಯವಲ್ಲ" ಎಂದು ಗರಂ ಆಗಿ ಪ್ರತಿಕ್ರಿಯಿಸಿದರು.

ಆರ್.ಟಿ.ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾವು ಏನು ಕ್ರಮ ಕೈಗೊಂಡಿದ್ದೇವೆ ಎನ್ನುವುದು ಜನರ ಮುಂದಿದೆ. ಸಿದ್ದರಾಮಯ್ಯ ಏನ್ ಬೇಕಾದ್ರೂ ಹೇಳ್ತಾರೆ ರೀ.. ಇದರ ಹಿಂದೆ ರಾಜಕೀಯ ಪ್ರೇರಣೆಯೂ ಇದೆ. ಅವನು ಹೇಳಿದ್ದು ವೇದ ವಾಕ್ಯವಲ್ಲ. ಸಮಾಜಘಾತಕ ಶಕ್ತಿಗಳಿಗೆ ಕೆಲವರು ಕುಮ್ಮಕ್ಕು ಕೊಟ್ಟಿದ್ದಾರೆ. ಸಹಜವಾಗಿಯೇ ಆತಂಕ ಇರುತ್ತದೆ ಅಷ್ಟೇ. ಕ್ವಿಕ್ ಆಗಿ ಕ್ರಮ ಕೈಗೊಳ್ಳುತ್ತಿದ್ದೇವೆ. ಕೇರಳ ಕ್ರಾಸ್ ಬಾರ್ಡರ್​ನಿಂದ ಬರ್ತಿದ್ದಾರೆ. ಹಲವು ಆಯಾಮಗಳಿವೆ. ಅವೆಲ್ಲವನ್ನೂ ನಿಗ್ರಹಿಸಲು ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ" ಎಂದರು.


"ಗೃಹ ಸಚಿವರ ರಾಜೀನಾಮೆಗೆ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ. ಆದರೆ ಅದರ ಅಗತ್ಯವಿಲ್ಲ. ಯಾರೂ ರಾಜೀನಾಮೆ ನೀಡುವುದು ಬೇಡ. ಪರಿಸ್ಥಿತಿಯನ್ನು ಉತ್ತಮವಾಗಿಯೇ ನಿಭಾಯಿಸಲಾಗುತ್ತಿದೆ" ಎಂದರು.

"ಮಂಗಳೂರಿನಲ್ಲಿ ಕಳೆದ 10 ದಿನಗಳಲ್ಲಿ 3ನೇ ಹತ್ಯೆ ವಿಚಾರ ಸಂಬಂಧ ಅಲ್ಲಿನ ಎಡಿಜಿಪಿಗೆ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸೂಚನೆ ಕೊಟ್ಟಿದ್ದೇನೆ. ಪ್ರತಿಯೊಂದು ಕೊಲೆಯನ್ನೂ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಬೆಂಗಳೂರಿನಲ್ಲಿ ಡಿಜಿ, ಐಜಿಪಿ ಮತ್ತು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ಕರಾವಳಿ ಭಾಗದಲ್ಲಿ ವಿಶೇಷ ಕಠಿಣ ಕ್ರಮ ಜಾರಿ ಮಾಡುವ ಬಗ್ಗೆ ಚರ್ಚೆ ನಡೆಸುತ್ತೇನೆ. ಕರಾವಳಿ ಕರ್ನಾಟಕ ಭಾಗದಲ್ಲಿ ನಿರ್ಬಂಧ ಹೇರುವ ಬಗ್ಗೆ ಚರ್ಚೆ ನಡೆಸುತ್ತೇನೆ. ಕರ್ನಾಟಕದಿಂದ ಕೇರಳ ಬಾರ್ಡರ್‌ಗೆ ಓಡಾಡುವ 58 ರಸ್ತೆಗಳಿವೆ. ಈ ವಿಚಾರವಾಗಿ ಉನ್ನತ ಮಟ್ಟದಲ್ಲಿ ಸಭೆ ನಡೆಸುತ್ತೇನೆ" ಎಂದು ಹೇಳಿದರು.

ಕಾನೂನು ಸುವ್ಯವಸ್ಥೆ ವಿಫಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಆದರೆ ಅದೇ ಸಿದ್ದರಾಮಯ್ಯ ಇದ್ದಾಗ 30 ಸರಣಿ ಕೊಲೆಯಾಗಿದೆ. ಆಗ ಅವ್ರು ಏನು ಮಾಡುತ್ತಿದ್ದರು? ಎಲ್ಲವನ್ನೂ ರಾಜಕೀಯ ಚಷ್ಮಾದಲ್ಲಿ ನೋಡುವುದಲ್ಲ. ಪರಿಸ್ಥಿತಿಯನ್ನು ನಾವು ಸರಿಯಾಗಿ ನಿಭಾಯಿಸಿದ್ದೇವೆ. ಕೆಲವು ದಿವಸಗಳಲ್ಲಿ ಕಾದು ನೋಡಿ ಎಲ್ಲ ಕ್ರಮ ನಿಮಗೇ ಗೊತ್ತಾಗುತ್ತದೆ.

ಈ ಹಿಂದೆ ಐದು ವರ್ಷ ಆಡಳಿತ ನಡೆಸಿದ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಎಸ್​ಡಿಪಿಐ ಮತ್ತು ಪಿ‌ಎಫ್ಐ ಮೇಲಿನ ಕೇಸ್ ತೆಗೆದಿದ್ದೇ ಇದಕ್ಕೆಲ್ಲ‌ ಕಾರಣ. ಈ ಎಲ್ಲಾ ಆರ್ಗನೈಸ್ಡ್‌ ಕ್ರೈಂ ಮಟ್ಟ ಹಾಕುವ ಕೆಲಸವನ್ನು ನಾವು ಮಾಡುತ್ತೇವೆ ಎಂದರು. ಫಾಜಿಲ್ ಕೊಲೆಗೆ ಕಾರಣದ ಪ್ರಾಥಮಿಕ ಮಾಹಿತಿ ನನಗೆ ಗೊತ್ತಿಲ್ಲ. ಪೊಲೀಸರಿಗೆ ಗೊತ್ತಿರಬಹುದು, ತನಿಖೆ ನಡೆಸುತ್ತಿದ್ದಾರೆ ಎಂದ ಸಿಎಂ, ರಿವೆಂಜ್ ಕೊಲೆನಾ ಎಂಬ ಪ್ರಶ್ನೆಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.

ಇದನ್ನೂಓದಿ:Praveen murder case.. ಕೇರಳಕ್ಕೆ ಹೋಗಿ ಆರೋಪಿಗಳನ್ನು ಬಂಧಿಸುವಂತೆ ಸಿಎಂ ಸೂಚನೆ

ABOUT THE AUTHOR

...view details