ಕರ್ನಾಟಕ

karnataka

ETV Bharat / city

ಹೆಚ್​ಡಿಡಿ ಜೊತೆ ಸಿ.ಎಂ.ಇಬ್ರಾಹಿಂ ಸಮಾಲೋಚನೆ: ಜೆಡಿಎಸ್ ಸೇರಲು ರೆಡಿಯಾಗಿದ್ದಾರೆ ಮಾಂತ್ರಿಕ ಮಾತುಗಾರ - H D Deve gowda

ಕಳೆದ ತಿಂಗಳು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಭೇಟಿ ಮಾಡಿ ಒಂದು ಸುತ್ತಿನ ಮಾತುಕತೆ ನಡೆಸಿದ್ದ ಇಬ್ರಾಹಿಂ, ಇಂದು ಎರಡನೇ ಬಾರಿ ಪದ್ಮನಾಭ ನಗರದಲ್ಲಿರುವ ಗೌಡರ ನಿವಾಸಕ್ಕೆ ಭೇಟಿ ನೀಡಿ, ಕೆಲ ಕಾಲ ಸಮಾಲೋಚನೆ ನಡೆಸಿದ್ದಾರೆ.

ಹೆಚ್​ಡಿಡಿ ಜೊತೆ ಸಿ.ಎಂ.ಇಬ್ರಾಹಿಂ ಸಮಾಲೋಚನೆ
ಹೆಚ್​ಡಿಡಿ ಜೊತೆ ಸಿ.ಎಂ.ಇಬ್ರಾಹಿಂ ಸಮಾಲೋಚನೆ

By

Published : Jan 7, 2021, 11:35 AM IST

ಬೆಂಗಳೂರು: ಮಾಜಿ ಕೇಂದ್ರ ಸಚಿವ, ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ಅವರು ಮತ್ತೆ ಜೆಡಿಎಸ್​ಗೆ ವಾಪಸ್ ಆಗಲು ಸಿದ್ಧರಾಗಿದ್ದಾರೆ ಎನ್ನಲಾಗಿದ್ದು, ಎರಡನೇ ಬಾರಿ ಜೆಡಿಎಸ್​ ವರಿಷ್ಠ ಹೆಚ್​.ಡಿ. ದೇವೇಗೌಡರ ಜೊತೆ ಸಮಾಲೋಚನೆ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷ ತಮ್ಮನ್ನು ನಿರ್ಲಕ್ಷಿಸಿದೆ ಎಂಬ ಕಾರಣಕ್ಕಾಗಿ ಅಸಮಾಧಾನಗೊಂಡಿರುವ ಸಿ.ಎಂ.ಇಬ್ರಾಹಿಂ, ಈಗಾಗಲೇ ಪಕ್ಷ ಬಿಡುವ ಸುಳಿವು ನೀಡಿದ್ದಾರೆ. ಆದರೆ ಅದಕ್ಕೂ ಮುನ್ನ ರಾಜ್ಯಾದ್ಯಂತ ಇರುವ ತಮ್ಮ ಬೆಂಬಲಿಗರು, ಆಪ್ತರ ಜತೆ ಚರ್ಚಿಸಲು ಇಬ್ರಾಹಿಂ ನಿರ್ಧರಿಸಿದ್ದರು. ಈ ಹಿನ್ನೆಲೆ ಮಾತುಕತೆ ಆರಂಭಿಸಿದ್ದಾರೆ.

ಕಳೆದ ತಿಂಗಳು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಭೇಟಿ ಮಾಡಿ ಒಂದು ಸುತ್ತಿನ ಮಾತುಕತೆ ನಡೆಸಿದ್ದ ಇಬ್ರಾಹಿಂ, ಇಂದು ಎರಡನೇ ಬಾರಿ ಪದ್ಮನಾಭ ನಗರದಲ್ಲಿರುವ ಗೌಡರ ನಿವಾಸಕ್ಕೆ ಭೇಟಿ ನೀಡಿ, ಸಮಾಲೋಚನೆ ನಡೆಸಿದ್ದಾರೆ. ಈ ಹಿಂದೆ ಕೂಡ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಬ್ರಾಹಿಂ ನಿವಾಸಕ್ಕೆ ತೆರಳಿ ಪಕ್ಷಕ್ಕೆ ಆಹ್ವಾನ ನೀಡಿದ್ದರು.

ರಾಜ್ಯ ರಾಜಕಾರಣದಲ್ಲಿ ಮಾಂತ್ರಿಕ ಮಾತುಗಾರ ಎಂದೇ ಹೆಸರಾಗಿರುವ ಸಿ.ಎಂ.ಇಬ್ರಾಹಿಂ ಜೆಡಿಎಸ್​ಗೆ ಸೇರ್ಪಡೆಯಾಗುವುದರಿಂದ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ. ನಾಯಕರ ಮಾತುಕತೆ ಯಶಸ್ವಿಯಾದರೆ ಜನವರಿ 15 ನಂತರ ವಿದ್ಯುಕ್ತವಾಗಿ ಜೆಡಿಎಸ್​ಗೆ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ABOUT THE AUTHOR

...view details