ಕರ್ನಾಟಕ

karnataka

By

Published : Aug 1, 2022, 12:32 PM IST

ETV Bharat / city

ಸಿಎಂ ಕಾದಾಟ: ಡಿಕೆಶಿ, ಸಿದ್ದರಾಮಯ್ಯ ಜೊತೆಗೆ ಮುನ್ನೆಲೆಗೆ ಬಂದ ಎಸ್​.ಆರ್.​ ಪಾಟೀಲ್​

ಕರ್ನಾಟಕ ಕಾಂಗ್ರೆಸ್​ನಲ್ಲಿ ಚುನಾವಣೆಗೂ ಮೊದಲೇ ಸಿಎಂ ಸ್ಥಾನಕ್ಕಾಗಿ ಜಂಗೀಕುಸ್ತಿ ನಡೆಸುತ್ತಿದೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ ಮಧ್ಯೆ ತುರುಸಿನ ಪೈಪೋಟಿ ನಡೆಯುತ್ತಿದ್ದರೆ, ಇದೀಗ ಮಾಜಿ ಸಚಿವ ಎಸ್​ ಆರ್​ ಪಾಟೀಲ್​ ಅವರ ಹೆಸರು ಮುನ್ನೆಲೆಗೆ ಬಂದಿದೆ.

cm-fight-continues-in-karnataka-congress
ಸಿಎಂ ಕಾದಾಟ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್​ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯೆ ನಡೆಯುತ್ತಿರುವ ಜಟಾಪಟಿ ಜೋರಾಗಿರುವ ಮಧ್ಯೆಯೇ ಈ ರೇಸ್​ನಲ್ಲಿ ಇನ್ನೊಬ್ಬರ ಹೆಸರು ಕೇಳಿ ಬಂದಿದೆ. 2023 ರ ವಿಧಾನಸಭಾ ಚುನಾವಣೆಗೆ ಎಸ್‌ಆರ್ ಪಾಟೀಲ್ ಅವರನ್ನು "ಸಿಎಂ ಅಭ್ಯರ್ಥಿ"ಯಾಗಿ ಘೋಷಿಸಬೇಕು.

ಅವರು ಆದರ್ಶ ಸಿಎಂ ಆಗಲಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿಕೆ ನೀಡಿರುವುದು ಕಾಂಗ್ರೆಸ್​ನಲ್ಲಿ ಮತ್ತೊಂದು ಸುತ್ತಿನ ತಿಕ್ಕಾಟಕ್ಕೆ ಕಾರಣವಾಗಿದೆ.

ಭಾನುವಾರ ಎಸ್​.ಆರ್​. ಪಾಟೀಲ್​ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೀರಪ್ಪ ಮೊಯ್ಲಿ ಅವರು ಮಾತನಾಡಿ, "ಮುಂದಿನ ಸಿಎಂ ಆಗಲು ಎಸ್​.ಆರ್​. ಪಾಟೀಲ್​ ಅವರು ಯೋಗ್ಯರು ಮತ್ತು ಆದರ್ಶ ನಾಯಕರಾಗಿದ್ದಾರೆ. ಅವರನ್ನು ಈ ಹಿಂದೆ ನಾನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಲು ಸೂಚಿಸಿದ್ದೆ" ಎಂದು ಹೇಳಿಕೆ ನೀಡಿದ್ದಾರೆ.

ಇದು ಕಾಂಗ್ರೆಸ್​ನಲ್ಲಿ ಕುದಿ ಉಂಟು ಮಾಡಿದೆ. ಈಗಾಗಲೇ ಡಿಕೆ ಶಿವಕುಮಾರ್​ ಮತ್ತು ಸಿದ್ದರಾಮಯ್ಯ ಅವರ ಮಧ್ಯೆ ಸಿಎಂ ಕಾದಾಟ ನಡೆಯುತ್ತಿದೆ. ಇದೀಗ ಮೊಯ್ಲಿ ಅವರ ಹೇಳಿಕೆಯಿಂದ ಎಸ್​.ಆರ್​ ಪಾಟೀಲ್​ ಅವರು ಕೂಡ ಕಣಕ್ಕಿಳಿದಂತಾಗಿದೆ.

ಡಿಕೆಶಿ ಪ್ರತಿಕ್ರಿಯೆ: ವೀರಪ್ಪ ಮೊಯ್ಲಿ ಅವರ ಎಸ್​ಆರ್​ ಪಾಟೀಲ್​ ಸೂಕ್ತ ಸಿಎಂ ಹೇಳಿಕೆ ಬಗ್ಗೆ ಮಾಧ್ಯಮಗಳು ಕೆಪಿಸಿಸಿ ಅಧ್ಯಕ್ಷರ ಬಳಿ ಪ್ರಶ್ನಿಸಿದಾಗ, ಉತ್ತರ ನೀಡಲು ನಿರಾಕರಿಸಿ ಈ ಬಗ್ಗೆ ಮೊಯ್ಲಿ ಅವರನ್ನೇ ಕೇಳಿ ಎಂದು ಹೇಳಿದರು.

ಓದಿ:ಮಳೆಹಾನಿ, ಮಂಕಿಪಾಕ್ಸ್ ಕುರಿತು ನಾಳೆ ಅಧಿಕಾರಿಗಳ ಸಭೆ: ಸಿಎಂ ಬೊಮ್ಮಾಯಿ

ABOUT THE AUTHOR

...view details