ಬೆಂಗಳೂರು :ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ ಸಂಜೆ ಸಚಿವ ಸಂಪುಟ ಸಭೆ ಕರೆದಿದ್ದು ಮಳೆಯಿಂದ ರಾಜ್ಯದಲ್ಲಿ ಹಾನಿಯಾದ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ನಾಳೆ ಸಚಿವ ಸಂಪುಟ ಸಭೆ ಕರೆದ ಮುಖ್ಯಮಂತ್ರಿ.. ನೆರೆ ಪರಿಹಾರ ಕುರಿತಂತೆ ಚರ್ಚೆ.. - cabinet Account sharing
ಸಚಿವರನ್ನು ಪ್ರವಾಹ ಪೀಡಿತ ಜಿಲ್ಲೆಗಳು ಹಾಗೂ ಮಳೆ ಹಾನಿ ಪ್ರದೇಶಗಳಿಗೆ ಕಳುಹಿಸಿ ವರದಿ ನೀಡಲು ಸಿಎಂ ತಿಳಿಸಿದ್ದರು. ಅದರಂತೆ ಮಂತ್ರಿ ಮಂಡಲ ಸಭೆಯಲ್ಲಿ ಸಚಿವರುಗಳಿಂದ ವರದಿ ಪಡೆದು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ.
ನೂತನ ಸಚಿವರನ್ನು ಪ್ರವಾಹ ಪೀಡಿತ ಜಿಲ್ಲೆಗಳು ಹಾಗೂ ಮಳೆ ಹಾನಿ ಪ್ರದೇಶಗಳಿಗೆ ಕಳುಹಿಸಿ ವರದಿ ನೀಡಲು ಸಿಎಂ ತಿಳಿಸಿದ್ದು, ಅದರಂತೆ ಮಂತ್ರಿಮಂಡಲ ಸಭೆಯಲ್ಲಿ ಸಚಿವರುಗಳಿಂದ ವರದಿ ಪಡೆಯಲಿದ್ದಾರೆ.
ಸಚಿವರು ನೀಡುವ ಮಾಹಿತಿ ಆಧರಿಸಿ ಅತಿವೃಷ್ಟಿ ಸಂತ್ರಸ್ತರಿಗೆ ತಗೆದುಕೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ. ರಾಜ್ಯದಲ್ಲಿ ನೆರೆಹಾನಿ ಬಗ್ಗೆ ಅಧ್ಯಯನ ನಡೆಸುತ್ತಿರುವ ಕೇಂದ್ರ ತಂಡ ವರದಿ ನೀಡಿದ ಬಳಿಕ ಕೇಂದ್ರ ಸರ್ಕಾರದಿಂದ ಹೆಚ್ಚಿನ ಪರಿಹಾರ ಕೇಳುವ ಬಗ್ಗೆಯೂ ಸಂಪುಟ ಸಭೆಯಲ್ಲಿ ಸಮಾಲೋಚನೆ ನಡೆಸಲಿದ್ದಾರೆ. ಸಂಪುಟ ಸಭೆಗೂ ಮುನ್ನವೇ ಮುಖ್ಯಮಂತ್ರಿ ಯಡಿಯೂರಪ್ಪನವರು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಿದ್ದಾರೆ.