ಕರ್ನಾಟಕ

karnataka

ETV Bharat / city

ಅನರ್ಹರನ್ನ ಗೆಲ್ಲಿಸಲು ಪಣತೊಟ್ಟ ಬಿಎಸ್​ವೈ.. ಇಂದು ಬೆಂಗಳೂರು, ಹೊಸಕೋಟೆಯಲ್ಲಿ ಭರ್ಜರಿ ರೋಡ್ ಶೋ - bangalore by poll

ಅನರ್ಹರನ್ನು ಗೆಲ್ಲಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಪಣ ತೊಟ್ಟಿದ್ದು, ಇಂದು ಬೆಂಗಳೂರು ಹಾಗೂ ಹೊಸಕೋಟೆಯಲ್ಲಿ  ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.

cm b.s.yadiyurappa roadshow in Bangalore and hosakote
ಸಿಎಂ ಬಿ.ಎಸ್.ಯಡಿಯೂರಪ್ಪ

By

Published : Nov 27, 2019, 11:59 AM IST

ಬೆಂಗಳೂರು:ಅನರ್ಹರನ್ನು ಗೆಲ್ಲಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಪಣ ತೊಟ್ಟಿದ್ದು, ಇಂದು ಬೆಂಗಳೂರು ಹಾಗೂ ಹೊಸಕೋಟೆಯಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.

ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್​ ಪರ ಬಿಎಸ್​ವೈ ಮತಯಾಚನೆ ಮಾಡಲಿದ್ದಾರೆ. ಕಳೆದ ವಾರವಷ್ಟೇ ಎಂಟಿಬಿ ನಾಪಪತ್ರ ಸಲ್ಲಿಕೆಗೆ ಬಂದಿದ್ದ ಬಿಎಸ್​ವೈ ಇಂದು ಎಂಟಿಬಿ ಪರ ಮತ್ತೊಮ್ಮೆ ಪ್ರಚಾರ ನಡೆಸಿ, ಮತಯಾಚನೆ ಮಾಡಲಿದ್ದಾರೆ. ಇದಲ್ಲದೇ ಮತ್ತೆರಡು ಬಾರಿ ಪ್ರಚಾರ ಕೈಗೊಂಡು ರೋಡ್ ಶೋ, ಸಮಾವೇಶ ಮೂಲಕ ಪ್ರಚಾರ ನಡೆಸಲಿದ್ದಾರೆ.

ಇನ್ನು, ಮಹಾಲಕ್ಷ್ಮಿ ಲೇಔಟ್​ನಲ್ಲಿ ಗೋಪಾಲಯ್ಯ ಪರ ಹಾಗೂ ಕೆ.ಆರ್​.ಪುರಂನಲ್ಲಿ ಭೈರತಿ ಬಸವರಾಜ್ ಪರ ರೋಡ್ ಶೋ ಮೂಲಕ ಸಿಎಂ ಪ್ರಚಾರ ನಡೆಸಲಿದ್ದಾರೆ.

ABOUT THE AUTHOR

...view details