ಆನೇಕಲ್:ಬೆಂಗಳೂರಿನ ಬೈಯ್ಯಪ್ಪನಹಳ್ಳಿಯಿಂದ ಆನೇಕಲ್ನ ಹೀಲಲಿಗೆ ಮೂಲಕ ಹೊಸೂರು ರೈಲ್ವೆ ನಿಲ್ದಾಣದವರೆಗೆ ದ್ವಿಪಥ ರೈಲ್ವೆ ಹಳಿ ಸಂಪರ್ಕ ಕಾಮಗಾರಿ ಪ್ರಗತಿ ಕುರಿತು ಪರಿಶೀಲಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕಂದಾಯ ಸಚಿವ ಆರ್. ಅಶೋಕ್ ಇಬ್ಬರೂ ಹೀಲಲಿಗೆ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದರು.
ಓದಿ: ದೇಶದ್ರೋಹಿ ಹೇಳಿಕೆ ಆರೋಪ ಕೇಸ್: 3ನೇ ದಿನವೂ ವಿಚಾರಣೆಗೆ ಹಾಜರಾದ ಆಯಿಷಾ
ಬೈಯಪ್ಪನಹಳ್ಳಿಯಿಂದ 30 ಕಿಮೀ ಉದ್ದದ ಹೀಲಲಿಗೆ ರೈಲ್ವೆ ನಿಲ್ದಾಣದವರೆಗಿನ ಕಾಮಗಾರಿ ವೀಕ್ಷಣೆಗೆ ಯಶವಂತಪುರದಿಂದ ರೈಲಿನಲ್ಲಿಯೇ ಆಗಮಿಸಿದ ಮುಖ್ಯಮಂತ್ರಿ ತಂಡ ಹೀಲಲಿಗೆ ರೈಲ್ವೆ ನಿಲ್ದಾಣದಲ್ಲಿ ಬಂದಿಳಿದರು. ಹೊಸೂರುವರೆಗಿನ ರೈಲ್ವೆ ದ್ವಿಪಥ ರಸ್ತೆ ಕಾಮಗಾರಿಯೂ ಚಾಲ್ತಿಯಲ್ಲಿದ್ದು, ಈ ಕುರಿತು ಮಾಹಿತಿ ಪಡೆದರು.
ಇದರಿಂದ ಈಗಾಗಲೇ ಕೆಂಗೇರಿಯಿಂದ ಪುಶ್-ಪುಲ್ ರೈಲ್ವೆ ಸಂಚಾರದ ಯೋಜನೆ ಪೂರ್ಣಗೊಂಡಿದ್ದು, ಈ ಯೋಜನೆಯಲ್ಲಿ ಯಶವಂತಪುರದಿಂದ ಬೈಯಪ್ಪನಹಳ್ಳಿ, ಹೀಲಲಿಗೆ ವರೆಗೆ ಉಪನಗರ ಸಂಪರ್ಕ ರೈಲ್ವೆ ಪುಶ್ ಪುಲ್ ಚಾಲನೆಗೊಂಡರೆ ಗ್ರಾಮೀಣ ಜನರು ನಗರಕ್ಕೆ ಬಂದು ಹೊರಡಲು ಅನುಕೂಲವಾಗಲಿದೆ.
ಸಬ್ ಅರ್ಬನ್ ರೈಲ್ವೆ ಕಾಮಗಾರಿ ವೀಕ್ಷಿಸಿದ ಸಿಎಂ ಬಿಎಸ್ವೈ ಸಬ್ ಅರ್ಬನ್ ರೈಲು ಕಾಮಗಾರಿಯ ಸಿಜಿ ನಕ್ಷೆಯ ರೂಪುರೇಷೆಗಳನ್ನು ವೀಕ್ಷಿಸಿದ ತರುವಾಯ ರೈಲ್ವೆ ಇಲಾಖಾ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಬಂದ ರೈಲಿನಲ್ಲಿಯೇ ಸಿಎಂ ಯಡಿಯೂರಪ್ಪ ತಂಡ ತೆರಳಿದರು.