ಕರ್ನಾಟಕ

karnataka

ಕೊರೊನಾ ನಡುವೆ ರಾಜ್ಯದಲ್ಲಿ 10,255 ಕೋಟಿ ರೂ. ವಿದೇಶಿ ನೇರ ಹೂಡಿಕೆ: ಸಿಎಂ

By

Published : Oct 23, 2020, 2:50 PM IST

ಕೊರೊನಾ ನಡುವೆಯೂ ರಾಜ್ಯದಲ್ಲಿ 10,255 ಕೋಟಿ ರೂಪಾಯಿ ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದೆ ಎಂದು ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

cm bsy
ಸಿಎಂ ಬಿಎಸ್​ವೈ

ಬೆಂಗಳೂರು:ಹೂಡಿಕೆದಾರರಿಗೆ ಕರ್ನಾಟಕ ನೆಚ್ಚಿನ ಮತ್ತು ಆದ್ಯತೆಯ ತಾಣವಾಗಿ ಮುಂದುವರೆದಿದ್ದು, 2020ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ದೇಶದಲ್ಲೇ ಅತಿ ಹೆಚ್ಚು ವಿದೇಶಿ ನೇರ ಬಂಡವಾಳವನ್ನು ರಾಜ್ಯ ಆಕರ್ಷಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಕೊರೊನಾ ಸವಾಲುಗಳ ನಡುವೆಯೂ, ಈ ಮೂರು ತಿಂಗಳಲ್ಲಿ ರಾಜ್ಯದಲ್ಲಿ 10,255 ಕೋಟಿ ರೂ. ಹೂಡಿಕೆಯಾಗಿದೆ. 3,540 ಕೋಟಿ ರೂ. ಹೂಡಿಕೆಯಾಗಿರುವ ಗ್ರಾಹಕ ಎಲೆಕ್ಟ್ರಾನಿಕ್ಸ್ & ಸರಕುಗಳ ಕ್ಲಸ್ಟರ್ ಹುಬ್ಬಳ್ಳಿಯಲ್ಲಿ ತಲೆಯೆತ್ತಲಿದೆ. ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಅನುಗುಣವಾಗಿ, ಇಲ್ಲಿ ವಿಶ್ವದರ್ಜೆಯ ಸೌಲಭ್ಯ ಲಭ್ಯವಾಗಲಿದ್ದು, 20 ಸಾವಿರ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದರ ಜೊತೆಗೆ ಅಭಿವೃದ್ಧಿಗೆ ಪೂರಕವಾಗಿರುವ ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಕರ್ನಾಟಕ ಪ್ರೋತ್ಸಾಹಿಸುತ್ತಲೇ ಬಂದಿದೆ. ನಗರ ಚಲನಶೀಲತೆ, ಉಪಗ್ರಹ ತಂತ್ರಜ್ಞಾನ, ಸಾವಯವ ಕೃಷಿ, ಆಗ್ಮೆಂಟೆಡ್ ರಿಯಾಲಿಟಿ ಮೊದಲಾದ ವಿಭಿನ್ನ ಕಾರ್ಯಕ್ಷೇತ್ರಗಳಲ್ಲಿ ಕರ್ನಾಟಕದ 15 ನವೋದ್ಯಮಗಳು ರಾಷ್ಟ್ರೀಯ ನವೋದ್ಯಮ ಪ್ರಶಸ್ತಿ ಗೆದ್ದಿರುವುದು ಹೆಮ್ಮೆಯ ಸಂಗತಿ ಎಂದು ಸಿಎಂ ತಿಳಿಸಿದ್ದಾರೆ.

ABOUT THE AUTHOR

...view details