ಬೆಂಗಳೂರು: 72ನೇ ಗಣರಾಜ್ಯೋತ್ಸವದ ಮುನ್ನಾದಿನ ವಿವಿಧ ಗಣ್ಯರಿಗೆ ಪದ್ಮ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಅತ್ಯುನ್ನತ ಗೌರವ ಪ್ರಶಸ್ತಿಗೆ ಭಾಜನರಾದ ರಾಜ್ಯದ ಸಾಧಕರಿಗೆ ಸಿಎಂ ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.
ವೈದ್ಯಕೀಯ ವಿಭಾಗದಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದ ಡಾ. ಬೆಳ್ಳೆ ಮೋನಪ್ಪ ಹೆಗ್ಡೆ, ಸಾಹಿತ್ಯ ಹಾಗೂ ಶಿಕ್ಷಣಕ್ಕಾಗಿ ಪದ್ಮಭೂಷಣ ಪುರಸ್ಕಾರಕ್ಕೆ ಭಾಜನರಾದ ಡಾ. ಚಂದ್ರಶೇಖರ ಕಂಬಾರ ಅವರಿಗೆ ಸಿಎಂ ಅಭಿನಂದಿಸಿ ಟ್ವಿಟ್ ಮಾಡಿದ್ದಾರೆ. ಹಾಗೆಯೇ ಪದ್ಮಶ್ರೀಗೆ ಭಾಜನರಾದ ರಾಜ್ಯದ ಮಾತಾ ಮಂಜಮ್ಮ ಜೋಗತಿ, ಲಕ್ಷ್ಮೀನಾರಾಯಣ ಕಶ್ಯಪ್ ಹಾಗೂ ಕೆವೈ ವೆಂಕಟೇಶ್ ಅವರನ್ನು ಯಡಿಯೂರಪ್ಪ ಅಭಿನಂದಿಸಿದ್ದಾರೆ.
ಇದನ್ನೂ ಓದಿ: ಬಿಎಂ ಹೆಗ್ಡೆಗೆ ಪದ್ಮವಿಭೂಷಣ, ಚಂದ್ರಶೇಖರ್ ಕಂಬಾರ್ಗೆ ಪದ್ಮಭೂಷಣ ಗೌರವ
ಪದ್ಮ ಪುರಸ್ಕಾರ 2021: ವಿಜೇತರ ಸಂಪೂರ್ಣ ಪಟ್ಟಿ ಇಂತಿದೆ..
ಕರ್ನಾಟಕದಿಂದ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾದ ಡಾ. ಬಿ.ಎಂ.ಹೆಗಡೆ ಹಾಗೂ ಪದ್ಮ ಭೂಷಣ ಪ್ರಶಸ್ತಿಗೆ ಆಯ್ಕೆಯಾದ ಶ್ರೀ ಚಂದ್ರಶೇಖರ ಕಂಬಾರ ಇವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಕರ್ನಾಟಕದಿಂದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಮಾತೆ ಬಿ. ಮಂಜಮ್ಮ ಜೋಗತಿ, ರಂಗಸಾಮಿ ಲಕ್ಷ್ಮಿ ನಾರಾಯಣ ಕಶ್ಯಪ್ ಮತ್ತು ಕೆ.ವೈ.ವೆಂಕಟೇಶ್ ಅವರಿಗೆ ಹೃತ್ಪೂರ್ವಕ ಅಭಿನಂದನೆ ತಿಳಿಸಿದ್ದಾರೆ.