ಬೆಂಗಳೂರು:ಲಾಕ್ಡೌನ್ ಸಡಿಲಿಕೆಯಾದ ನಂತರ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೋಟೆಲ್ ತಿಂಡಿ ಸವಿದರು. ಲಾಲ್ಬಾಗ್ ಬಳಿಯ ಎಂಟಿಆರ್ ಹೋಟೆಲ್ನಲ್ಲಿ ಉಪಹಾರ ಸೇವಿಸಿದರು.
ಎಂಟಿಆರ್ ಹೋಟೆಲ್ಗೆ ತೆರಳಿ ಉಪಹಾರ ಸವಿದ ಸಿಎಂ ಬಿಎಸ್ವೈ - CM had breakfast
ಲಾಕ್ಡೌನ್ ಸಡಿಲಗೊಂಡ ನಂತರ ಮೊದಲ ಬಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಲಾಲ್ಬಾಗ್ ಬಳಿಯ ಎಂಟಿಆರ್ ಹೋಟೆಲ್ನಲ್ಲಿ ಉಪಹಾರ ಸೇವಿಸಿದರು.
ಉಪಹಾರ ಸವಿದ ಸಿಎಂ ಬಿಎಸ್ವೈ
ನಗರದ ಯಡಿಯೂರು ವಾರ್ಡ್ ಬಳಿ ವಲ್ಲಭಭಾಯಿ ಅಕಾಡೆಮಿ ಕಟ್ಟಡ ಉದ್ಘಾಟಿಸಿ ವಾಪಸಾಗುವ ಸಂದರ್ಭದಲ್ಲಿ ಯಡಿಯೂರಪ್ಪ ಎಂಟಿಆರ್ ಹೋಟೆಲ್ಗೆ ಭೇಟಿ ನೀಡಿ ಬಿಸಿ ಬೇಳೆಬಾತ್ ತಿಂದರು.
ಕಂದಾಯ ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಶಂಕರ್ಗೌಡ ಪಾಟೀಲ್ ಕೂಡ ಈ ವೇಳೆ ಸಾತ್ ನೀಡಿದರು. ಯಡಿಯೂರಪ್ಪ ಅವರು ಸಾಮಾನ್ಯವಾಗಿ ಆಗಾಗ ಈ ಹೋಟೆಲ್ಗೆ ಹೋಗಿ ಉಪಹಾರ ಸವಿಯುತ್ತಿದ್ದರು.