ಕರ್ನಾಟಕ

karnataka

ETV Bharat / city

ಮಾತಿಗೆ ಬಗ್ಗದಿದ್ದರೆ ಸುಗ್ರೀವಾಜ್ಞೆ ಜಾರಿ... ಉದ್ಧಟತನ ಪ್ರದರ್ಶಿಸಿದ್ರೆ ಹುಷಾರ್​ ಎಂದ ಸಿಎಂ

ಪಾದರಾಯನಪುರ ಪ್ರಕರಣ ನಂತರ ಕೆಂಡಾಮಂಡಲರಾಗಿರುವ ಮುಖ್ಯಮಂತ್ರಿ ಬಿ. ಎಸ್​. ಯಡಿಯೂರಪ್ಪ ಬಿಗಿ ಕ್ರಮಗಳ ಜೊತೆಗೆ ಲಾಡ್​ಡೌನ್ ಮುಂದುವರೆಸುವುದಾಗಿ ತಿಳಿಸಿದ್ದಾರೆ. ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದರೆ ಅದು ಶಿಕ್ಷಾರ್ಹ ಅಪಾರ ಎಂದು ಎಚ್ಚರಿಕೆ ನೀಡಿದ್ದಾರೆ.

cm-bs-yadiyurappa-statement-on-lock-down
ಸಿಎಂ ಬಿ. ಎಸ್​. ಯಡಿಯೂರಪ್ಪ

By

Published : Apr 20, 2020, 3:07 PM IST

ಬೆಂಗಳೂರು: ಮೇ 3ರ ವರೆಗೆ ಲಾಕ್​ಡೌನ್ ಮುಂದುವರೆಯಲಿದ್ದು, ಇನ್ನಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಂಡು ಲಾಕ್‌ಡೌನ್ ಮುಂದುವರೆಸುತ್ತೇವೆ‌ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಅವರು, ನಿನ್ನೆ ಪಾದರಾಯನಪುರದಲ್ಲಿ ನಡೆದ ಘಟನೆ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ತೇವೆ. ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದರೆ ಸಹಿಸಲ್ಲ. ಕೇರಳ ಮತ್ತು ಉತ್ತರ ಪ್ರದೇಶದಲ್ಲಿ ಇಂತಹ ಘಟನೆಗಳು ನಡೆದರೆ ಅದು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ ಎಂದರು.

ಆರೋಗ್ಯ ಇಲಾಖೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ರೆ ಶಿಕ್ಷಾರ್ಹ ಅಪರಾಧ

ಅದೇ ರೀತಿ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆದರೆ ಅದು ಶಿಕ್ಷಾರ್ಹ ಅಪರಾಧ ಎಂದು ಸುಗ್ರೀವಾಜ್ಞೆ ಹೊರಡಿಸುತ್ತೇವೆ. ಅವರ ಆರೋಗ್ಯದ ದೃಷ್ಟಿಯಿಂದ ನಾವು ಈ ಕ್ರಮ ತೆಗೆದುಕೊಳ್ಳುತ್ತೇವೆ. ಇವರೆಲ್ಲಾ ಕಾನೂನು ಕೈಗೆ ತೆಗೆದುಕೊಂಡವರಂತೆ ವರ್ತಿಸಿದ್ದಾರೆ. ಇದನ್ನು ಸಹಿಸಲ್ಲವೆಂದು ಸಿಎಂ ಖಡಕ್​ ಸಂದೇಶ ರವಾನಿಸಿದರು.

ABOUT THE AUTHOR

...view details