ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ ಹೂಡಿಕೆ ಮಾಡಿ: ಜಾಗತಿಕ ಉದ್ಯಮಿಗಳಿಗೆ ಸಿಎಂ ಯಡಿಯೂರಪ್ಪ ಕರೆ - ಕರ್ನಾಟಕ ಬಂಡವಾಳ ಹೂಡಿಕೆ ಸಮಾವೇಶ

ರಾಜ್ಯದಲ್ಲಿ ಜಾಗತಿಕ ಉದ್ಯಮ ಹೂಡಿಕೆಗೆ ಉತ್ತಮ ಅವಕಾಶವಿದೆ. ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ. ಹಾಗಾಗಿ, ಹೂಡಿಕೆ ಮಾಡಲು ಮುಂದೆ ಬನ್ನಿ ಎಂದು ಜಾಗತಿಕ ಕಂಪನಿಗಳಿಗೆ ಸಿಎಂ ಬಿ.ಎಸ್​​.ಯಡಿಯೂರಪ್ಪನವರು ಕರೆ ನೀಡಿದರು.

cm-bs-yadiyurappa-call-for-global-entrepreneurs-to-invest
ಏಕದಿನ ಇನ್ವೆಸ್ಟ್ ಕರ್ನಾಟಕ ಬಂಡವಾಳ ಹೂಡಿಕೆ ಸಮಾವೇಶ

By

Published : Jul 15, 2021, 7:40 PM IST

Updated : Jul 15, 2021, 8:00 PM IST

ಬೆಂಗಳೂರು: ಹೂಡಿಕೆದಾರರಿಗೆ ರಾಜ್ಯ ಉತ್ತಮ ತಾಣವಾಗಿದೆ. ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ. ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದೆ ಬನ್ನಿ ಎಂದು ಜಾಗತಿಕ ಕಂಪನಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ಕೊಟ್ಟರು.

ಇನ್ವೆಸ್ಟ್ ಕರ್ನಾಟಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಸಿಎಂ ಮಾತು

ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಏಕದಿನ ಇನ್ವೆಸ್ಟ್ ಕರ್ನಾಟಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ, ರಾಜ್ಯದಲ್ಲಿ ಜಾಗತಿಕ ಉದ್ಯಮ ಹೂಡಿಕೆಗೆ ಉತ್ತಮ ಅವಕಾಶವಿದೆ. ಕೋವಿಡ್ ಸಮಯದಲ್ಲಿ ಹೊಸ ಸವಾಲುಗಳು ಎದುರಾಗಿದ್ದು, ಸಾಂಕ್ರಾಮಿಕದಂತಹ ಕಾಲದಲ್ಲಿ ಹೂಡಿಕೆದಾರರನ್ನು ಆಕರ್ಷಿಸುವ ಸವಾಲು ನಮ್ಮ ಮುಂದಿದೆ. ಅಗತ್ಯ ಸೇವೆ ಮತ್ತು ಉದ್ದಿಮೆಗಳಿಗೆ ಲಾಕ್ ಡೌನ್ ವೇಳೆ ಸರ್ಕಾರ ಅವಕಾಶ ಕಲ್ಪಿಸಿತ್ತು. ಹೂಡಿಕೆದಾರರಿಗೆ ಎಲ್ಲ ರೀತಿಯ ಸಹಕಾರವನ್ನು ಸರ್ಕಾರ ನೀಡುತ್ತಲೇ ಬಂದಿದೆ.

2020 ರಲ್ಲಿ 520 ಯೋಜನೆಗಳನ್ನು 77 ಸಾವಿರ ಕೋಟಿ ರೂ ವೆಚ್ಚದಲ್ಲಿ ವಿವಿಧ ವಲಯದಲ್ಲಿ ಹೂಡಿಕೆ ಮಾಡಲಾಗಿದೆ. 2021 ರಲ್ಲಿಯೂ ಹೂಡಿಕೆಗೆ ಆಹ್ವಾನ ನೀಡುತ್ತಿದ್ದು, ಮುಂದೆ ಬರುವಂತೆ ಉದ್ಯಮಿಗಳಿಗೆ ಮನವಿ ಮಾಡಿದರು.

ಲಾಕ್ ಡೌನ್ ವೇಳೆಯಲ್ಲಿ ಹಲವು ಕಂಪನಿಗಳು ಹೂಡಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದವು. ಹಾಗಾಗಿ ಒಂದು ದಿನದ ಒಡಂಬಡಿಕೆಗೆ ಸಹಿ ಹಾಕುವ ಕಾರ್ಯಕ್ರಮ ಆಯೋಜಿಸಿದ್ದು, 2022 ರ ಫೆಬ್ರವರಿಯಲ್ಲಿ ಮತ್ತೆ ಸಮಾವೇಶ ಮಾಡಲಿದ್ದೇವೆ ಎಂದು ಯಡಿಯೂರಪ್ಪನವರು ತಿಳಿಸಿದರು.

ಸಮಾವೇಶದಲ್ಲಿ ಸುಮಾರು 20ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಬಂಡವಾಳ ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಲಾಯಿತು. 28600 ಕೋಟಿ ರೂ. ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದು, ಕೊರೊನಾ ಸಂದರ್ಭದಲ್ಲಿಯೂ ದೇಶ, ವಿದೇಶದ ಹಲವು ಕಂಪನಿಗಳು ಬಂಡವಾಳ ಹೂಡಿಕೆಗೆ ಸಹಿ ಹಾಕಿದವು.

Last Updated : Jul 15, 2021, 8:00 PM IST

ABOUT THE AUTHOR

...view details