ಕರ್ನಾಟಕ

karnataka

ETV Bharat / city

ರಿಲ್ಯಾಕ್ಸ್ ಮೂಡಲ್ಲಿ ಸಿಎಂ.. 83 ಸಿನಿಮಾ ವೀಕ್ಷಿಸಿದ ಬೊಮ್ಮಾಯಿ - ಬೆಂಗಳೂರಲ್ಲಿ 83 ಸಿನಿಮಾ ವೀಕ್ಷಿಸಿದ ಸಿಎಂ ಬೊಮ್ಮಾಯಿ

83 ಚಿತ್ರವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಲ್ಲಿ ವೀಕ್ಷಿಸಿದರು.

83 ಸಿನಿಮಾ ವೀಕ್ಷಿಸಿದ ಬೊಮ್ಮಾಯಿ
83 ಸಿನಿಮಾ ವೀಕ್ಷಿಸಿದ ಬೊಮ್ಮಾಯಿ

By

Published : Dec 26, 2021, 8:51 PM IST

ಬೆಂಗಳೂರು: ಸಾಕಷ್ಟು ಸವಾಲುಗಳ ನಡುವೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನವನ್ನು ಯಶಸ್ವಿಯಾಗಿ ಮುಗಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಲ್ಪ ರಿಲ್ಯಾಕ್ಸ್ ಆಗಿದ್ದು, ಬಿಡುವಿಲ್ಲದ ರಾಜಕಾರಣದ ನಡುವೆಯೂ ವಿಶ್ವಕಪ್ ಜಯಿಸಿದ ಭಾರತೀಯ ಕ್ರಿಕೆಟ್ ತಂಡವನ್ನಾಧಾರಿಸಿದ 83 ಚಿತ್ರವನ್ನು ವೀಕ್ಷಿಸಿದರು.

ಕೊರಮಂಗಲದ ಫೋರಂ ಮಾಲ್​​ನಲ್ಲಿರುವ ಪಿ.ವಿ.ಆರ್. ಚಿತ್ರಮಂದಿರಕ್ಕೆ ಭೇಟಿ ನೀಡಿದ ಸಿಎಂ, ಭಾರತೀಯ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ, ಸಚಿವ ಅಶೋಕ ಮತ್ತಿತರರ ಜೊತೆ 83 ಚಿತ್ರವನ್ನು ವೀಕ್ಷಿಸಿದರು. ಚಿತ್ರ ಪ್ರಾರಂಭವಾಗುವುದಕ್ಕೂ ಮುನ್ನ ದಿವಂಗತ ಮಾಜಿ ಕ್ರಿಕೆಟಿಗ ಯಶ್ ಪಾಲ್ ಶರ್ಮಾ ಅವರ ಸ್ಮರಣಾರ್ಥ ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು.

83 ಸಿನಿಮಾ ವೀಕ್ಷಿಸಿದ ಸಿಎಂ ಬೊಮ್ಮಾಯಿ

(ಇದನ್ನೂ ಓದಿ: ಫೋಟೋಗಾಗಿ ಕಪಿಲ್​ದೇವ್​ ಹಿಂದೆ ಓಡಿದ್ದ ಕಿಚ್ಚ ಸುದೀಪ್​..'83' ಸಿನಿಮಾ ಪ್ರಮೋಷನ್​ನಲ್ಲಿ​ ಬಾಲ್ಯದ ನೆನಪು!)

ಇಂದು ಬೆಳಗ್ಗೆ ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದ್ದ ಮಾಜಿ ಕ್ರಿಕೆಟಿಗ ಸೈಯದ್ ಕಿರ್ಮಾನಿ, ಬಸವರಾಜ ಬೊಮ್ಮಾಯಿ ಅವರಿಗೆ 83 ಚಿತ್ರ ವೀಕ್ಷಿಸುವಂತೆ ಆಹ್ವಾನ ನೀಡಿದ್ದರು. ಕ್ರೀಡಾ ಪ್ರೇಮಿಯಾಗಿರುವ ಸಿಎಂ, ಆಹ್ವಾನ ನಿರಾಕರಿಸದೆ ಭಾನುವಾರವಾದ ಇಂದು ಮಧ್ಯಾಹ್ನ ಇದ್ದ ಬಿಡುವಿನ ಸಮಯದಲ್ಲಿ ಸಿನಿಮಾ ವೀಕ್ಷಣೆ ಮಾಡಿದರು.

83 ಚಿತ್ರದಲ್ಲಿ ಕಪೀಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ಹಾಗೆಯೇ ದೀಪಿಕಾ ಪಡುಕೋಣೆ ಕೂಡ ಚಿತ್ರದಲ್ಲಿದ್ದಾರೆ.

(ಇದನ್ನೂ ಓದಿ: 2021ರ ಸವಿನೆನಪು : ಹಾಕಿಗೆ ಮರುಜೀವ ತುಂಬಿದ ಟೋಕಿಯೋ ಒಲಿಂಪಿಕ್ಸ್ ಮೆಡಲ್)

For All Latest Updates

ABOUT THE AUTHOR

...view details