ಬೆಂಗಳೂರು: ಸಪ್ನ ಬುಕ್ ಹೌಸ್ ವತಿಯಿಂದ 66 ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ 66 ಸಾಹಿತಿಗಳ 66 ಕನ್ನಡ ಪುಸ್ತಕಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದರು. ಇದೇ ವೇಳೆ ಎಲ್ಲಾ ಸಾಹಿತಿಗಳಿಗೆ ಸನ್ಮಾನ ಮಾಡಿ ಗೌರವ ಸಲ್ಲಿಸಲಾಯಿತು.
ಸಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕರಾದ ನಿತಿನ್ ಷಾ, ಹಿರಿಯ ಸಾಹಿತಿ ಡಾ. ಕಮಲಾ ಹಂಪನಾ, ಡಾ.ಎಚ್.ಎಸ್.ವೆಂಕಟೇಶ ಮೂರ್ತಿ, ವಿಮರ್ಶಕರಾದ ಡಾ.ಸಿ.ಎನ್ ರಾಮಚಂದ್ರನ್ ಭಾಗಿಯಾಗಿದ್ದರು. ಸಪ್ನ ಬುಕ್ ಹೌಸ್ ಈವರೆಗೂ 6,500 ಪುಸ್ತಕಗಳನ್ನು ಪ್ರಕಟಿಸಿದೆ.
ಕನ್ನಡ ಪುಸ್ತಕ ಲೋಕಾರ್ಪಣೆಗೊಳಿಸಿದ ಸಿಎಂ ಇದನ್ನೂ ಓದಿ:ದೆವ್ವ ಬಿಡಿಸೋ ಹೆಸರಲ್ಲಿ ಐದು ವರ್ಷ ಅಕ್ಕ, ತಂಗಿ ಮೇಲೆ ಲೈಂಗಿಕ ದೌರ್ಜನ್ಯ; ನಕಲಿ ಬಾಬಾ, ಪುತ್ರನ ಬಂಧನ
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸಪ್ನ ಬುಕ್ ಹೌಸ್, ಪುಸ್ತಕ ಭಂಡಾರ. ನಿರಂತರವಾಗಿ ಕನ್ನಡ ಬೆಳೆಸುವ ಕಾಯಕ ಮಾಡಿದ್ದಾರೆ. ಸಪ್ನ ಬುಕ್ ಹೌಸ್ ಕನ್ನಡಕ್ಕಾಗಿ, ಕನ್ನಡ ಪುಸ್ತಕಕ್ಕಾಗಿ ಕೊಟ್ಟ ಕೊಡುಗೆ ಅಪಾರ. ಭಾಷೆ, ಸಾಹಿತ್ಯಕ್ಕೆ ಜಾತಿ-ಧರ್ಮ ಇಲ್ಲ. ಇದು ಚಿಂತನೆಯಿಂದ ಬಂದಿರುವಂತದ್ದು. ಹೀಗಾಗಿ ಸಾಹಿತ್ಯಗಳು ಬೆರಗುಗೊಳಿಸುತ್ತವೆ, ಚೈತನ್ಯಗೊಳಿಸುತ್ತವೆ ಎಂದರು.
ಇದನ್ನೂ ಓದಿ:ಕೋವಿಡ್ ನಿಯಂತ್ರಣ, ಸೋಂಕಿನ ಹೊಸ ತಳಿ ಸಂಬಂಧ ಸಂಜೆ ಸಿಎಂ ಸಭೆ: ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ
ಕನ್ನಡ ಕೇವಲ ಆರ್ಥಿಕವಾಗಿ ಬೆಳೆದರೆ ಶ್ರೀಮಂತವಾಗುವುದಿಲ್ಲ. ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಬೆಳೆಯಬೇಕು. ಕನ್ನಡಕ್ಕೆ ಸಾಂಸ್ಕೃತಿಕ ದಿಕ್ಸೂಚಿ ಕೊಡಲು ಸರ್ಕಾರ ಕೈಜೋಡಿಸುತ್ತದೆ. ಡಿಜಿಟಲ್ ಯುಗದಲ್ಲೂ ಪ್ರಿಂಟ್ ಪುಸ್ತಕಗಳಿಗೆ ಪ್ರಾಮುಖ್ಯತೆ ಕೊಡಬೇಕು. ಪ್ರಿಂಟಿಂಗ್ ಕೂಡ ಕಡಿಮೆ ಮಾಡಬಾರದು ಎಂದು ಹೇಳಿದರು.