ಕರ್ನಾಟಕ

karnataka

ETV Bharat / city

ರಾಜ್ಯದ 2.65 ಲಕ್ಷ ಕೋಟಿ ಬಜೆಟ್ ಲಿಡ್ಕರ್ ತಯಾರಿಸಿದ ಬ್ಯಾಗ್​ನಲ್ಲಿತ್ತು: ಸಿಎಂ ಬೊಮ್ಮಾಯಿ - leather exhibition

ಲಿಡ್ಕರ್ ತಯಾರಿಸಿದ ಬ್ಯಾಗ್​​ನಲ್ಲಿ 2 ಲಕ್ಷ 65 ಸಾವಿರ ಮೊತ್ತದ ಬಜೆಟ್ ಇತ್ತು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ರಾಜ್ಯ ಮಟ್ಟದ ಚರ್ಮ ಕುಶಲಕರ್ಮಿಗಳ ಸಮಾವೇಶ ಹಾಗೂ ಚರ್ಮ ಕರಕುಶಲ ವಸ್ತು ಪ್ರದರ್ಶನ
ರಾಜ್ಯ ಮಟ್ಟದ ಚರ್ಮ ಕುಶಲಕರ್ಮಿಗಳ ಸಮಾವೇಶ ಹಾಗೂ ಚರ್ಮ ಕರಕುಶಲ ವಸ್ತು ಪ್ರದರ್ಶನ

By

Published : May 14, 2022, 9:37 AM IST

ಬೆಂಗಳೂರು: ರೈತರಿಗೆ ಬೇಕಾದ ಎಲ್ಲ ವಸ್ತುಗಳನ್ನು ಚರ್ಮ ಕುಶಲಗಾರರ ಸಮುದಾಯ ಮಾಡುತ್ತಿದೆ. ಇದೇ ಉದ್ಯಮದಲ್ಲಿ ಮುಂದುವರಿದರೆ ಸಾಮಾಜಿಕವಾಗಿ ಬೆಳೆಯಲು ಸಾಧ್ಯವಿಲ್ಲ. ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಮುಂದೆ ಬರಬೇಕು. 2 ಲಕ್ಷ 65 ಸಾವಿರ ಮೊತ್ತದ ರಾಜ್ಯ ಬಜೆಟ್ ಲಿಡ್ಕರ್ ತಯಾರಿಸಿದ ಬ್ಯಾಗ್​​ನಲ್ಲಿ ಇತ್ತು. ಆದ್ದರಿಂದ 235 ಕೋಟಿ ರೂ. ನೀಡಿ ಮೂರು ಸಾವಿರ ಜನರಿಗೆ ಉದ್ಯೋಗ ನೀಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮೇ 13 ರಿಂದ 17 ವರೆಗೆ 5 ದಿನಗಳ ಅರಮನೆ ಮೈದಾನದಲ್ಲಿ ನಡೆಯುವ ರಾಜ್ಯ ಮಟ್ಟದ ಚರ್ಮ ಕುಶಲಕರ್ಮಿಗಳ ಸಮಾವೇಶ ಹಾಗೂ ಚರ್ಮ ಕರಕುಶಲ ವಸ್ತು ಪ್ರದರ್ಶನಕ್ಕೆ ಸಿಎಂ ಚಾಲನೆ ನೀಡಿ ಮಾತನಾಡಿದರು. ಸ್ವಯಂ ಉದ್ಯೋಗ ಮಾಡಲು ಅನುಕೂಲ ಕಲ್ಪಿಸಿದ್ದೇವೆ. ಪ್ರತಿಯೊಂದು ಊರಿನಲ್ಲಿ 100 ಮಂದಿಗೆ ಉದ್ಯೋಗ ನೀಡಲಾಗುವುದು. 30 ಲಕ್ಷ ಮನೆಗಳಿಗೆ 75 ಯೂನಿಟ್ ನೀಡಲಾಗಿದೆ. ಎಜುಕೇಶನ್ ಹಬ್​ಗಳಲ್ಲಿ ಎಸ್.ಸಿ, ಎಸ್.ಟಿ ಹಾಸ್ಟೆಲ್ ಮಾಡಲಾಗುವುದು. ಸ್ವಯಂ ಉದ್ಯೋಗ ಮಾಡಬೇಕಾಗಿದೆ. ಒಂದೊಂದು ಜಿಲ್ಲೆಗೆ ಒಂದೂಂದು ಲಿಡ್ಕರ್ ಬ್ಯಾಂಕ್ ಮಾಡಿ ಅನುಕೂಲ ಕಲ್ಪಿಸಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಚರ್ಮ ಉದ್ಯೋಗಿಗಳಿಗೆ ಯಂತ್ರ ಕೊಡಲು ಪ್ರೋತ್ಸಾಹಿಸಲು ಹಾವೇರಿ, ಬಾಗಲಕೋಟೆ ಎರಡು ಕ್ಲಸ್ಟರ್ ಆರಂಭಿಸಲಾಗುತ್ತಿದೆ. ಯುವಕರು ತರಬೇತಿ ಪಡೆದು ಮುಂದೆ ಬರಬೇಕು. ಯುವಕರಿಗೆ 10 ಲಕ್ಷ ರೂ.ಯನ್ನು ಸರ್ಕಾರದಿಂದ ಮಂಜೂರು ಮಾಡಲಾಗುತ್ತಿದೆ. ಅನೇಕ ಯುವಕರು ನಿರುದ್ಯೋಗಿಯಾಗಿ ಅಲೆಯುವುದರ ಬದಲಾಗಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೇಂದ್ರ ಸಚಿವ ನಾರಾಯಣ ಸ್ವಾಮಿ, ಸಂಸದ ಪಿ ಸಿ ಮೋಹನ್, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಅಶ್ವತ್ಥನಾರಾಯಣ, ಪರಿಷತ್ ಸದಸ್ಯ ರಮೇಶಗೌಡ, ಅಧ್ಯಕ್ಷ ಎನ್.ಲಿಂಗಣ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

(ಇದನ್ನೂ ಓದಿ:ಆ್ಯಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಸರ್ಕಾರದಿಂದ ನಿವೇಶನ.. ನಾಳೆಯೇ ಆದೇಶ : ಸಿಎಂ ಘೋಷಣೆ)

ABOUT THE AUTHOR

...view details