ಕರ್ನಾಟಕ

karnataka

ರಾಜ್ಯದೆಲ್ಲೆಡೆ ಯೋಗಾಭಿಯಾನ ನಡೆಸುವಂತೆ ವಚನಾನಂದ ಶ್ರೀಗಳಿಗೆ ಸಿಎಂ ಸಲಹೆ

ಕರ್ನಾಟಕ ಯೋಗಾಸನಾ ಸ್ಪೋರ್ಟ್ಸ್‌ ಅಸೋಷಿಯೇಷನ್‌ ಸಹಯೋಗದಲ್ಲಿ ಕರ್ನಾಟಕದಾದ್ಯಂತ ಕರ್ನಾಟಕ ಯೋಗ ಅಭಿಯಾನ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಚನಾನಂದ ಸ್ವಾಮೀಜಿ ನೇತೃತ್ವದ ತಂಡಕ್ಕೆ ಮನವಿ ಮಾಡಿದ್ದಾರೆ.

By

Published : May 3, 2022, 9:24 AM IST

Published : May 3, 2022, 9:24 AM IST

cm-bommai-advised-to-do-the-yoga-campaign-across-the-state
ರಾಜ್ಯದ 31 ಜಿಲ್ಲೆಗಳಲ್ಲೂ ಕರ್ನಾಟಕ ಯೋಗ ಅಭಿಯಾನ ನಡೆಸಿ: ಸಿಎಂ ಸಲಹೆ

ಬೆಂಗಳೂರು:ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ಯೋಗಾಸನ ಸ್ಪೋರ್ಟ್ಸ್‌ ಅಸೋಷಿಯೇಷನ್‌ ಸಹಯೋಗದಲ್ಲಿ ಶ್ವಾಸಯೋಗ ಸಂಸ್ಥೆ ಮತ್ತು ಪತಂಜಲಿ ಯೋಗಪೀಠದ ನೇತೃತ್ವದಲ್ಲಿ ರಾಜ್ಯದ 31 ಜಿಲ್ಲೆಗಳಲ್ಲೂ “ಕರ್ನಾಟಕ ಯೋಗ ಅಭಿಯಾನ” ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ. ತಮ್ಮ ನಿವಾಸಕ್ಕೆ ಆಗಮಿಸಿದ್ದ ಪಂಚಮಸಾಲಿ ಪೀಠದ ಪೀಠಾಧ್ಯಕ್ಷರು, ಶ್ವಾಸ ಯೋಗ ಸಂಸ್ಥೆಯ ಸಂಸ್ಥಾಪಕ ವಚನಾನಂದ ಸ್ವಾಮೀಜಿ ನೇತೃತ್ವದ ತಂಡವನ್ನು ಭೇಟಿ ಮಾಡಿದ ಅವರು, ರಾಜ್ಯದಲ್ಲಿ ಯೋಗ ಪ್ರಚುರಪಡಿಸುವ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು.

ಸಿಎಂ ಮಾತನಾಡಿ, ರಾಜ್ಯದಲ್ಲಿ ಯೋಗ ಪ್ರಚುರಪಡಿಸುವಲ್ಲಿ ಮಹತ್ವದ ಪಾತ್ರವನ್ನು ಶ್ವಾಸಯೋಗ ಸಂಸ್ಥೆಯ ಮೂಲಕ ವಚನಾನಂದ ಶ್ರೀಗಳು ಮಾಡುತ್ತಿದ್ದಾರೆ. ಇದೀಗ ಅವರ ನೇತೃತ್ವದಲ್ಲಿ ಕರ್ನಾಟಕ ಯೋಗಾಸನ ಸ್ಪೋರ್ಟ್ಸ್‌ ಅಸೋಸಿಯೇಷನ್ ಪ್ರಾರಂಭಿಸಲಾಗಿದೆ. ನ್ಯಾಷನಲ್‌ ಯೋಗಾಸನ ಸ್ಪೋರ್ಟ್ಸ್‌ ಫೆಡರೇಷನ್‌ ಸಹಯೋಗ ಸಂಸ್ಥೆಯಾಗಿ ರಚಿಸಲಾಗಿರುವ ಈ ಸಂಸ್ಥೆಯಿಂದ ಉತ್ತಮ ಕೆಲಸಗಳಾಗುವ ಭರವಸೆ ಇದೆ ಎಂದರು.

ಬಳಿಕ ಮಾತನಾಡಿದ ವಚನಾನಂದ ಶ್ರೀ, ರಾಜ್ಯದ 31 ಜಿಲ್ಲೆಗಳಲ್ಲೂ ಕರ್ನಾಟಕ ಯೋಗ ಅಭಿಯಾನವನ್ನು ಉದ್ದೇಶಿಸಲಾಗಿದೆ. ಇದಕ್ಕೆ ಮುಖ್ಯಮಂತ್ರಿಗಳು ಎಲ್ಲಾ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸಂಸ್ಥೆಯ ವತಿಯಿಂದ ಉತ್ತಮ ಪ್ರಸ್ತಾವನೆ ರಚಿಸಿ ಸಲ್ಲಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ನ್ಯಾಷನಲ್‌ ಯೋಗಾಸನ ಸ್ಪೋರ್ಟ್ಸ್‌ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ಡಾ. ಜಯದೀಪ್‌ ಆರ್ಯ, ಕರ್ನಾಟಕ ಯೋಗಾಸನ ಸ್ಪೋರ್ಟ್ಸ್‌ ಅಸೋಸಿಯೇಷನ್ ಅಧ್ಯಕ್ಷ ಭವರ್‌ಲಾಲ್‌ ಆರ್ಯ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ :ರಾಜ್ಯಕ್ಕೆ ಅಮಿತ್ ಶಾ ಆಗಮನ: ಸ್ವಾಗತಕ್ಕೂ ಮುನ್ನ ಬಿಎಸ್​​ವೈ ಭೇಟಿ ಮಾಡಿದ ಬೊಮ್ಮಾಯಿ

ABOUT THE AUTHOR

...view details