ಕರ್ನಾಟಕ

karnataka

ETV Bharat / city

'ಕನ್ನಡದ ಪ್ರದೇಶಗಳು ಮಹಾರಾಷ್ಟ್ರದಲ್ಲೂ ಇವೆ...' ಅಜಿತ್‌ ಪವಾರ್‌ಗೆ ತಕ್ಕ ತಿರುಗೇಟು ನೀಡಿದ ಬೊಮ್ಮಾಯಿ! - DCM ajith pawar statement

ಕರ್ನಾಟಕದ ಗಡಿ ವಿಚಾರದ ಬಗ್ಗೆ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಇತ್ತೀಚೆಗೆ ನೀಡಿರುವ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

cm-basavaraja-bommai-statement-against-ajith-pavar
ಕನ್ನಡ ಮಾತನಾಡುವ ಪ್ರದೇಶ ಮಹಾರಾಷ್ಟ್ರದಲ್ಲೂ ಇದೆ ಅದನ್ನು ಹೇಗೆ ತೆಗೆದುಕೊಳ್ಳಬೇಕು ಅಂತ ನಾವು ಯೋಚಿಸುತ್ತಿದ್ದೇವೆ: ಸಿಎಂ

By

Published : May 2, 2022, 1:38 PM IST

Updated : May 2, 2022, 1:45 PM IST

ಬೆಂಗಳೂರು: ಬೆಳಗಾವಿ ಬಗ್ಗೆ ಗಡಿ ಕ್ಯಾತೆ ತೆಗೆದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ‌, ನಮ್ಮ‌ ಒಂದಿಂಚೂ ಜಾಗವನ್ನೂ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಮಹಾರಾಷ್ಟ್ರದಲ್ಲಿ ರಾಜಕಾರಣ ಯಾವಾಗ ಇಕ್ಕಟ್ಟಿಗೆ ಸಿಲುಕುತ್ತದೋ ಆಗ ಕರ್ನಾಟಕದ ಗಡಿ ವಿಚಾರದ ಬಗ್ಗೆ ಅವರು ಮಾತನಾಡುತ್ತಾರೆ. ಈ ಕುರಿತಾಗಿ ಈಗಾಗಲೇ ಎಲ್ಲ ನಿರ್ಣಯವಾಗಿದೆ. ಕನ್ನಡ ಮಾತನಾಡುವ ಪ್ರದೇಶಗಳು ಮಹಾರಾಷ್ಟ್ರದಲ್ಲೂ ಇವೆ, ಅದನ್ನು ಹೇಗೆ ತೆಗೆದುಕೊಳ್ಳಬೇಕು ಅಂತ ನಾವು ಯೋಚಿಸುತ್ತಿದ್ದೇವೆ ಎಂದು ಗರಂ ಆಗಿಯೇ ಪ್ರತಿಕ್ರಿಯಿಸಿದರು.


ರಾಜಕೀಯ ಉಳಿವಿಗಾಗಿ ಭಾಷೆ ವಿಚಾರ, ಗಡಿ ವಿಚಾರದ ಬಗ್ಗೆ ಕ್ಯಾತೆ ತೆಗೆಯುವುದು ಅವರ ಸಣ್ಣತನ. ಅದನ್ನು ಕೈಬಿಡಬೇಕೆಂದು ನಾನು ಕೇಳಿಕೊಳ್ಳುತ್ತೇನೆ. ಈ ರೀತಿಯ ಪದ ಬಳಕೆ ಸರಿಯಲ್ಲ ಎಂದರು.

ಇದನ್ನೂ ಓದಿ:ಬಿಟ್ ಕಾಯಿನ್ ಪ್ರಕರಣ ಚುರುಕುಗೊಂಡರೆ ರಾಜ್ಯಕ್ಕೆ 3ನೇ ಸಿಎಂ ಸಿಗಲಿದ್ದಾರೆ: ಪ್ರಿಯಾಂಕ್ ಖರ್ಗೆ

Last Updated : May 2, 2022, 1:45 PM IST

For All Latest Updates

ABOUT THE AUTHOR

...view details