ಕರ್ನಾಟಕ

karnataka

ETV Bharat / city

2025ರ ವೇಳೆ ಕರ್ನಾಟಕದಿಂದ 1.5 ಟ್ರಿಲಿಯನ್​ ಡಾಲರ್​​​ ಆರ್ಥಿಕತೆ ಕೊಡುಗೆ: ಸಿಎಂ ಬೊಮ್ಮಾಯಿ - cm basavaraja bommai in FKCCI vision 2025

ದುಡ್ಡೇ ದೊಡ್ಡಪ್ಪ ಅನ್ನೋ ಮಾತಿತ್ತು, ಆದರೆ ಅದು 21ನೇ ಶತಮಾನದಲ್ಲಿ ಬದಲಾಗಲಿದೆ. ಒಂದು ಕಾಲದಲ್ಲಿ ದುಡ್ಡು ಇದ್ದವರು ಜಗತ್ತನ್ನು ಆಳುತ್ತಿದ್ದರು. ಅದಕ್ಕೂ ಮುನ್ನ ಭೂಮಿ ಇದ್ದವರು ಜಗತ್ತನ್ನು ಆಳತ್ತಿದ್ದರು. ಆದ್ರೀಗ ದುಡ್ಡು ಇದ್ದರೆ ದೊಡ್ಡಪ್ಪ ಆಗಲ್ಲ, ದುಡಿಮೆಯೇ ದೊಡ್ಡಪ್ಪ. ಜನರು ಚಟುವಟಿಕೆಯಿಂದ ಇದ್ದರಷ್ಟೇ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಿಎಂ ಬೊಮ್ಮಾಯಿ ಹೇಳಿದರು..

cm basavaraja bommai speaks on Karnataka development
ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ

By

Published : Mar 16, 2022, 7:07 AM IST

ಬೆಂಗಳೂರು: ರಾಜ್ಯದ ಜನರು ಅತ್ಯಂತ ಕ್ರಿಯಾಶೀಲರಾಗಿ ಎಲ್ಲ ಚಟುವಟಿಕೆಗಳಲ್ಲಿ ತೊಡಗಿದ್ದರೆ ಮಾತ್ರ ರಾಜ್ಯವೊಂದು ಅಭಿವೃದ್ಧಿ ಆಗುತ್ತದೆ.‌ ಎಕಾನಾಮಿ ಅನ್ನೋದು ಹಣವಲ್ಲ, ಎಕಾನಾಮಿ ಅಂದರೆ ಜನರು.‌ ಬಂಡವಾಳ ಹಾಕಿ ದುಡಿಮೆ ಮಾಡದೇ ಇದ್ದರೆ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ಹಾಗೆಯೇ ರಾಜ್ಯವೂ ಕೂಡ ಜನರು ಎಲ್ಲ ರಂಗದ ಚಟುವಟಿಕೆಯಲ್ಲಿ ಇದ್ದಾಗ ಮಾತ್ರ ಬೆಳೆಯುತ್ತದೆ ಎಂದು ಸಿಎಂ ಅಭಿಪ್ರಾಯಪಟ್ಟರು.

ಎಕಾನಮಿಯಲ್ಲಿ ಯಾವುದೇ ಮ್ಯಾಜಿಕ್‌ ಇಲ್ಲ, ಕೇವಲ ಫಲಿತಾಂಶವಷ್ಟೇ. ಹೀಗಾಗಿ ನಂಬರ್ ಇಟ್ಟಕೊಂಡು ಏನೋ ಸಾಧನೆ ಮಾಡಿದ್ದೀವಿ ಅನ್ನೋ ಭ್ರಮೆಯಲ್ಲಿ ಇರಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಕೈಗಾರಿಕೋದ್ಯಮಿಗಳಿಗೆ ಆರ್ಥಿಕ ಚಟುವಟಿಕೆ ಕುರಿತು ವಿವರಿಸಿದರು.

ಮಂಗಳವಾರ ನಗರದ ಖಾಸಗಿ ಹೋಟೆಲ್​ನಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ(ಎಫ್​ಕೆಸಿಸಿಐ) ಆಯೋಜಿಸಿದ್ದ ವಿಷನ್ 2025ರ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿ ಮಾತಾನಾಡಿದರು.

ದುಡಿಮೆಯೇ ದೊಡ್ಡಪ್ಪ:ದುಡ್ಡೇ ದೊಡ್ಡಪ್ಪ ಅನ್ನೋ ಮಾತಿತ್ತು, ಆದರೆ, ಅದು 21ನೇ ಶತಮಾನದಲ್ಲಿ ಬದಲಾಗಲಿದೆ. ಒಂದು ಕಾಲದಲ್ಲಿ ದುಡ್ಡು ಇದ್ದವರು ಜಗತ್ತನ್ನು ಆಳುತ್ತಿದ್ದರು. ಅದಕ್ಕೂ ಮುನ್ನ ಭೂಮಿ ಇದ್ದವರು ಜಗತ್ತನ್ನು ಆಳತ್ತಿದ್ದರು. ಆದರೀಗ ದುಡ್ಡು ಇದ್ದರೆ ದೊಡ್ಡಪ್ಪ ಆಗಲ್ಲ, ದುಡಿಮೆಯೇ ದೊಡ್ಡಪ್ಪ. ಜನರು ಚಟುವಟಿಕೆಯಿಂದ ಇದ್ದರಷ್ಟೇ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ. ಇದನ್ನು ಈ ಸಲದ ಬಜೆಟ್​ನಲ್ಲಿ ಮಂಡನೆ ಮಾಡಲಾಗಿದೆ ಅಂತ ವಿವರಿಸಿದರು..‌

2025 ಬಹಳ ಹತ್ತಿರ ಇದ್ದು ಮೂರು ವರ್ಷಕ್ಕೆ ಎಲ್ಲ ವಿಷನ್ ಇಟ್ಟುಕೊಂಡರೆ ಎರಡು ಬ್ಯಾಲೆನ್ಸ್ ಶೀಟ್ ತೆಗೆಯೋ ವೇಳೆಗೆ ಮೂರನೇಯದ್ದು ಬಂದಿರುತ್ತದೆ. ಹೀಗಾಗಿ 10 ವರ್ಷದ ವಿಷನ್ ಇಟ್ಟುಕೊಂಡು ಕೆಲಸ ಮಾಡಿ. ನವ ಕರ್ನಾಟಕದಿಂದ ನವ ಭಾರತದತ್ತ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸಮಗ್ರ ಆರ್ಥಿಕ ಬೆಳಣಿಗೆ ವಿಚಾರವಾಗಿ 2025ಕ್ಕೆ ಕರ್ನಾಟಕ ನಂಬರ್ ಒನ್ ರಾಜ್ಯವಾಗಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸಿಗೆ 1.5 ಟ್ರಿಲಿಯನ್ ಡಾಲರ್​ಗಳ ಕೊಡುಗೆ ಕರ್ನಾಟಕ ನೀಡಲಿದೆ ಎನ್ನುವ ವಿಶ್ವಾಸವನ್ನು ಬೊಮ್ಮಾಯಿ ವ್ಯಕ್ತಪಡಿಸಿದರು.

ಜನಪರ ಬಜೆಟ್:ಈ ಬಾರಿ ಬಜೆಟ್ ಮಂಡಣೆ ಮಾಡುವ ಮೊದಲು ಎರಡು ರೀತಿಯಲ್ಲಿ ಯೋಚಿಸಿದ್ದರು. ಕೋವಿಡ್ ಇರೋ ಕಾರಣ ಆರ್ಥಿಕ ನಷ್ಟವಾಗಿದ್ದು, ಸಾಲ ಆಗಿಬಿಟ್ಟಿದೆ. ಹೀಗಾಗಿ ಬಜೆಟ್ ಗಾತ್ರ ಕಡಿಮೆ ಇರಲಿ ಅಂದುಕೊಂಡು ಇದ್ದರು. ಆದರೆ ಅದು ಸುಳ್ಳಾಗಿ 19 ಸಾವಿರ ಕೋಟಿ ರೂ. ಬಜೆಟ್ ಹೆಚ್ಚಳ ಮಾಡಲಾಯ್ತು. ನಾನು ಜನಪರ ಬಜೆಟ್ ಮಂಡನೆ ಮಾಡಿದೆ. ರೈತರಿಗೆ, ಕಾರ್ಮಿಕರಿಗೆ ಅನುಕೂಲವಾಗುವ ಬಜೆಟ್ ಇದಾಗಿದೆ ಎಂದರು.

ಇದನ್ನೂ ಓದಿ:ಶಹಾಪುರ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣ: ಮೃತರ ಕುಟುಂಬಸ್ಥರಿಗೆ ಪರಿಹಾರ- ಸಚಿವ ಪ್ರಭು ಚೌಹಾಣ್

ಆರ್ಥಿಕತೆಗೆ ಶಕ್ತಿ ತುಂಬಲು ಮೂಲಸೌಕರ್ಯ, ರಸ್ತೆ, ರೈಲ್ವೇ, ಏರ್ ಪೋರ್ಟ್, ವಾಣಿಜ್ಯ, ಕೈಗಾರಿಕೆಗಳಿಗೆ ಬಹುದೊಡ್ಡ ಅವಕಾಶ ನೀಡಲಾಗಿದೆ. ಧಾರವಾಡ ಮತ್ತು ತುಮಕೂರಿನಲ್ಲಿ ವಿಶೇಷ ಹೂಡಿಕೆ ಪ್ರದೇಶ ಮಾಡಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ಫುಡ್ ಪಾರ್ಕ್, ಚೈನ್ನೈ-ಮುಂಬೈ ಕಾರಿಡಾರ್ ನಿರ್ಮಾಣ, ವಿಜಯಪುರ ಕಲಬುರಗಿಯಲ್ಲಿ ಜವಳಿ ಪಾರ್ಕ್, ಇವುಗಳೆಲ್ಲ ಸಧೃಢ ಆರ್ಥಿಕತೆಗೆ ಭದ್ರ ಬುನಾದಿಯಾಗಲಿವೆ ಎಂದರು.

ABOUT THE AUTHOR

...view details