ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು 2022-23ನೇ ಸಾಲಿನ ತಮ್ಮ ಚೊಚ್ಚಲ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಿದರು. 113 ಪುಟಗಳಿದ್ದ ಬಜೆಟ್ ಪ್ರತಿಯನ್ನು ಅವರು 2 ಗಂಟೆ 10 ನಿಮಿಷ ಓದಿದರು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯಾಹ್ನ 12.30 ರ ಸುಮಾರಿಗೆ ಸದನಕ್ಕೆ ಆಗಮಿಸುತ್ತಿದ್ದಂತೆ ವಂದೇ ಮಾತರಂ ಗೀತೆ ಮೊಳಗಿತು. ನಂತರ ಮುಖ್ಯಮಂತ್ರಿ ಬೊಮ್ಮಾಯಿ ಅವರು ಬಜೆಟ್ ಪ್ರತಿಯನ್ನು ಓದಲು ಆರಂಭಿಸಿದರು. 113 ಪುಟಗಳಿದ್ದ ಬಜೆಟ್ ಪ್ರತಿಯನ್ನು ಮಧ್ಯಾಹ್ನ 2.40 ಓದಿ ಮುಗಿಸಿದರು. ಅವರು ಬಜೆಟ್ ಓದಲು 2 ಗಂಟೆ 10 ನಿಮಿಷ ತೆಗೆದುಕೊಂಡರು.
ಆಯಾಸದಂತೆ ಕಂಡು ಬಂದ ಸಿಎಂ: ಬಜೆಟ್ ಪ್ರತಿಯನ್ನು ಓದುವಾಗ ಕೆಲವು ಕಡೆ ತೊದಲಿದ್ದು ಕಂಡುಬಂತು. ಇನ್ನೂ ಕೆಲ ಕಡೆ ಕನ್ನಡ ಉಚ್ಚಾರಣೆ ಅಸ್ಪಷ್ಟವಾಗಿತ್ತು. ಬೊಮ್ಮಾಯಿ ಬಜೆಟ್ ಪ್ರತಿ ಓದುವಾಗ ಒಂದು ರೀತಿಯ ಆಯಾಸದಂತೆ ಕಂಡು ಬಂದರು. ಸರ್ಕಾರದ ಯೋಜನೆಗಳು ಮತ್ತು ಸಾಧನೆಗಳನ್ನು ಹೇಳುವಾಗ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.