ಕರ್ನಾಟಕ

karnataka

ETV Bharat / city

ವಕ್ಫ್‌ ಮಂಡಳಿಯ ಅಭಿವೃದ್ಧಿಗೆ ಪರಿಣಾಮಕಾರಿ ಆಡಳಿತ ನೀಡಿ : ಸಿಎಂ ಬೊಮ್ಮಾಯಿ ಸೂಚನೆ - Bommai Notice to Waqf Board President

ವಕ್ಫ್‌ ಮಂಡಳಿಯ ಅಭಿವೃದ್ಧಿಗೆ ಪರಿಣಾಮಕಾರಿಯಾದ ಆಡಳಿತ ನೀಡುವಂತೆ ನೂತನ ಅಧ್ಯಕ್ಷರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು..

CM Basavaraja Bommai Notice to Waqf Board President
ಸಿಎಂ ಭೇಟಿ ಮಾಡಿದ ಮಹಮ್ಮದ್‌ ಷಫಿ ಸಾ-ಆದಿ ಹಾಗು ಶಶಿಕಲಾ ಜೊಲ್ಲೆ

By

Published : Nov 26, 2021, 5:03 PM IST

ಬೆಂಗಳೂರು :ರಾಜ್ಯದ ವಕ್ಫ್‌ ಮಂಡಳಿಯ ಅಭಿವೃದ್ಧಿಗೆ ಪರಿಣಾಮಕಾರಿಯಾದ ಆಡಳಿತ ನೀಡುವಂತೆ ನೂತನ ಅಧ್ಯಕ್ಷ ಮಹಮ್ಮದ್‌ ಷಫಿ ಸಾ-ಆದಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಪ್ರಥಮ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿಜೆಪಿ ಅಭ್ಯರ್ಥಿ ಮಹಮ್ಮದ್‌ ಷಫಿ ಸಾ-ಆದಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದರು. ಮುಜರಾಯಿ, ಹಜ್‌ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಸಾಥ್​​ ನೀಡಿದರು.

ಈ ವೇಳೆ ಮಹಮ್ಮದ್‌ ಷಫಿ ಸಾ-ಆದಿ ಮತ್ತು ಶಶಿಕಲಾ ಜೊಲ್ಲೆ ಅವರನ್ನು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅಭಿನಂದಿಸಿದರು. ನಂತರ ಕೆಲಕಾಲ ಮಾತುಕತೆ ನಡೆಸಿದರು. ವಕ್ಫ್ ಮಂಡಳಿ ಮುನ್ನಡೆಸುವಲ್ಲಿನ ಸವಾಲು ಮತ್ತು ಸರ್ಕಾರದ ಸಹಕಾರದ ಕುರಿತು ಸಮಾಲೋಚನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಖ್ಯಮಂತ್ರಿಗಳು, ಕರ್ನಾಟಕ ರಾಜ್ಯದ ವಕ್ಫ್ ಮಂಡಳಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸದ ವಿಷಯ ಎಂದು ಹೇಳಿದರು.

ಇದನ್ನೂ ಓದಿ:ಮೈಸೂರು: ಶಕ್ತಿಧಾಮಕ್ಕೆ ಭೇಟಿ ನೀಡಿದ ಶಿವರಾಜ್ ಕುಮಾರ್

ABOUT THE AUTHOR

...view details