ಕರ್ನಾಟಕ

karnataka

ETV Bharat / city

ಡಿ.13ರಂದು ಸಿಎಂ ಬೊಮ್ಮಾಯಿ ವಾರಣಾಸಿ ಪ್ರವಾಸ : ಅಧಿವೇಶನಕ್ಕೆ 3 ದಿನ ಗೈರಾಗ್ತಾರಾ ಮುಖ್ಯಮಂತ್ರಿ? - ವಾರಣಾಸಿಯಲ್ಲಿ ಬಿಜೆಪಿ ಪಕ್ಷದಿಂದ ಧಾರ್ಮಿಕ ಯಾತ್ರೆ

ಡಿ.13ರಂದು ವಾರಣಾಸಿಗೆ ಕುಟುಂಬ ಸದಸ್ಯರೊಂದಿಗೆ ತೆರಳಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಂದು ಸಂಜೆ ವಾರಣಾಸಿಯಲ್ಲಿ ನಡೆಯಲಿರುವ ಗಂಗಾ ಆರತಿಯಲ್ಲಿ ಪಾಲ್ಗೊಳ್ಳಲಿದ್ದಾರೆ..

CM Basavaraj  Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

By

Published : Dec 10, 2021, 2:15 PM IST

Updated : Dec 10, 2021, 2:53 PM IST

ಬೆಂಗಳೂರು :ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳಿಗೆ ಪಕ್ಷದಿಂದ ಮೂರು ದಿನಗಳ ಧಾರ್ಮಿಕ ಯಾತ್ರೆ ಆಯೋಜಿಸಲಾಗಿದೆ.

ರಾಜ್ಯದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಂಬ ಸಮೇತರಾಗಿ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಚಳಿಗಾಲದ ಅಧಿವೇನದ ನಡುವೆಯೂ ಸಿಎಂ ವಾರಣಾಸಿ ಪ್ರವಾಸ ಕೈಗೊಳ್ಳುತ್ತಿದ್ದಾರೆ.

ಡಿ.13ರಂದು ಉತ್ತರಪ್ರದೇಶದ ವಾರಣಾಸಿಯಲ್ಲಿ ಪಕ್ಷದಿಂದ ಧಾರ್ಮಿಕ ಯಾತ್ರೆ ಆಯೋಜಿಸಗಿದೆ. ಅದರಂತೆ ಡಿ.13ರಂದು ವಾರಣಾಸಿಗೆ ಕುಟುಂಬ ಸದಸ್ಯರೊಂದಿಗೆ ತೆರಳಲಿರುವ ಸಿಎಂ ಬಸವರಾಜ ಬೊಮ್ಮಾಯಿ, ಅಂದು ಸಂಜೆ ವಾರಣಾಸಿಯಲ್ಲಿ ನಡೆಯಲಿರುವ ಗಂಗಾ ಆರತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಡಿ.14ರಂದು ಸಾರಾನಾಥದಲ್ಲಿರುವ ಬೌದ್ಧ ಧರ್ಮದ ಪವಿತ್ರ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ನಂತರ ವಾರಣಾಸಿಯಲ್ಲಿರುವ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸ್ಮಾರಕ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಕೊನೆಯ ದಿನ ಅಯೋಧ್ಯೆ ಪ್ರವಾಸ ಮಾಡಲಿದ್ದಾರೆ. ರಾಮ ಜನ್ಮಭೂಮಿಗೆ ಭೇಟಿ ನೀಡಿ ದರ್ಶನ ಪಡೆದು ರಾಜ್ಯಕ್ಕೆ ವಾಪಸ್​​ ಆಗಲಿದ್ದಾರೆ.

ಡಿ.12ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾರಣಾಸಿಗೆ ತೆರಳಲು ಸಿಎಂ ಚಿಂತನೆ ನಡೆಸಿದ್ದಾರೆ. ಡಿ.13ರ ಸೋಮವಾರ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದೆ.

ಅಧಿವೇಶನ ಆರಂಭಗೊಂಡ ನಂತರ ಬೆಳಗಾವಿಯಿಂದ ವಿಶೇಷ ವಿಮಾನದ ಮೂಲಕ ವಾರಣಾಸಿಗೆ ತೆರಳುವ ಬಗ್ಗೆಯೂ ಚಿಂತನೆ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಸದ್ಯ ಆಯ್ಕೆಯನ್ನು ಮುಕ್ತವಾಗಿರಿಸಿಕೊಂಡಿದ್ದು, ನಾಳೆ ಪ್ರವಾಸದ ವೇಳಾಪಟ್ಟಿ ಸಿಎಂ ಕಚೇರಿಯಿಂದ ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ಪರಿಷತ್ ಚುನಾವಣೆಯಲ್ಲಿ ಬಿಜೆಪಿ 12ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ : ಸಚಿವ ಆರ್.ಅಶೋಕ್

Last Updated : Dec 10, 2021, 2:53 PM IST

For All Latest Updates

TAGGED:

ABOUT THE AUTHOR

...view details