ಕರ್ನಾಟಕ

karnataka

ETV Bharat / city

ಪುನೀತ್ ಪುಣ್ಯತಿಥಿಯಲ್ಲಿ ಸಿಎಂ ಭಾಗಿ: ನಾಳೆ ಅಭಿಮಾನಿಗಳಿಗೆ ಊಟ, ಸಕಲ ಸಿದ್ಧತೆ - ಪುನೀತ್ ರಾಜಕುಮಾರ ಮನೆಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ

ಪುನೀತ್ ರಾಜ್‌ಕುಮಾರ್ ಅವರ 11ನೇ ದಿನದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗವಹಿಸಿದರು.

puneeth
puneeth

By

Published : Nov 8, 2021, 5:03 PM IST

ಬೆಂಗಳೂರು:ಪುನೀತ್ ರಾಜ್‌ಕುಮಾರ್ ಮೃತಪಟ್ಟು ಇಂದಿಗೆ ಹನ್ನೊಂದನೇ ದಿನ. ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಸಮಾಧಿಗೆ ಪೂಜೆ ಸಲ್ಲಿಸಿ, ನಂತರ ಇಲ್ಲಿ ಬಂದಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸದಾಶಿವನಗರದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಮನೆಯಲ್ಲಿ ಆಯೋಜಿಸಿದ್ದ ಪುಣ್ಯತಿಥಿ ಕಾರ್ಯಕ್ರಮದಲ್ಲೂ ಸಿಎಂ ಭಾಗವಹಿಸಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.


ಪುನೀತ್ ಅವರ ಕುಟುಂಬ ಆಹ್ವಾನಿಸಿದ ಹಿನ್ನೆಲೆಯಲ್ಲಿ ಬಂದಿದ್ದೇನೆ. ನಾಳೆ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಇದೆ. ಅದನ್ನು ಅಚ್ಚುಕಟ್ಟಾಗಿ ಮಾಡಬೇಕೆಂದು ಎಲ್ಲಾ ಸಿದ್ಧತೆ ಮಾಡಿದ್ದಾರೆ. ನಾವು ಕೂಡ ಬೇಕಾದ ಸಿದ್ಧತೆ ಮಾಡಿದ್ದೇವೆ. 16ನೇ ತಾರೀಖಿನಂದು ಫಿಲ್ಮ್ ಚೇಂಬರ್​ನವರದ್ದು ಕಾರ್ಯಕ್ರಮ ಇದೆ. ನಂತರ ಏನೇನು ಕಾರ್ಯಕ್ರಮವನ್ನು ಮಾಡ್ಬೇಕು ಎಂದು ನೋಡ್ತೀವಿ ಎಂದರು

ಪುನೀತ್ ಪುಣ್ಯತಿಥಿಯಲ್ಲಿ ಸಿಎಂ ಭಾಗಿ

ಪುನೀತ್ ಕುಟುಂಬದ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಅವರಿಗೆ ಸರ್ಕಾರ ಏನೇನೆಲ್ಲಾ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಸಿಎಂ ಹೇಳಿದರು.

ABOUT THE AUTHOR

...view details