ಬೆಂಗಳೂರು : ಗುರು ಸಾರ್ವಭೌಮ ಶ್ರೀ ರಾಘವೇಂದ್ರ ರಾಯರ ಮಧ್ಯಾರಾಧನೆ ಪ್ರಯುಕ್ತ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಲವಾರು ಕೆಲಸಗಳ ಒತ್ತಡದ ನಡೆವೆಯೂ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು.
ರಾಘವೇಂದ್ರ ಶ್ರೀಗಳ ಮಧ್ಯಾರಾಧನೆ: ರಾಯರ ದರ್ಶನ ಮಾಡಿದ ಸಿಎಂ ಬೊಮ್ಮಾಯಿ..! - ರಾಯರ ದರ್ಶನ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ
ಶ್ರೀ ರಾಘವೇಂದ್ರ ರಾಯರ ಮಧ್ಯಾರಾಧನೆ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶೇಷಾದ್ರಿಪುರಂ ಬಡಾವಣೆಯಲ್ಲಿರುವ ನಂಜನಗೂಡು ರಾಘವೇಂದ್ರ ಸ್ವಾಮಿಗಳ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ರಾಯರ ಸ್ಮರಣೆ ಮಾಡಿದರು.
ಸಿಎಂ ಬೊಮ್ಮಾಯಿ
ಖಾಸಗಿ ನಿವಾಸದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ, ರಾಜಭವನದಲ್ಲಿ ಗಿವ್ ಇಂಡಿಯಾ ವತಿಯಿಂದ ಆಯೋಜಿಸಿದ್ದ ಭಾರತ ಲಸಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ, ನಿಯೋಗಗಳ ಭೇಟಿ ಮಾಡಿದರು. ನಂತರ ಶೇಷಾದ್ರಿಪುರಂ ಬಡಾವಣೆಯಲ್ಲಿರುವ ನಂಜನಗೂಡು ರಾಘವೇಂದ್ರ ಸ್ವಾಮಿಗಳ ದೇವಸ್ಥಾನಕ್ಕೆ ಭೇಟಿ ನೀಡಿದ ಸಿಎಂ, ರಾಯರ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ರಾಯರ ಸ್ಮರಣೆ ಮಾಡಿದರು.
ಈ ವೇಳೆ ಸಿಎಂಗೆ ವಸತಿ ಸಚಿವ ವಿ. ಸೋಮಣ್ಣ ಸಾಥ್ ನೀಡಿದರು