ಕರ್ನಾಟಕ

karnataka

ETV Bharat / city

ಉಕ್ರೇನ್​ನಿಂದ ನವೀನ್​ ಮೃತದೇಹ ತಾಯ್ನಾಡಿಗೆ... ಮೋದಿಗೆ ಧನ್ಯವಾದ ಸಲ್ಲಿಸಿದ ಸಿಎಂ ಬೊಮ್ಮಾಯಿ - ಪ್ರಧಾನಿ ಮೋದಿಗೆ ಸಿಎಂ ಬೊಮ್ಮಾಯಿ ಧನ್ಯವಾದ

ಉಕ್ರೇನ್​ನಲ್ಲಿ ಶೆಲ್​ ದಾಳಿಗೆ ಬಲಿಯಾದ ಹಾವೇರಿಯ ಯುವಕ ನವೀನ್​ ಮೃತದೇಹವನ್ನು ಮರಳಿ ತಾಯ್ನಾಡಿಗೆ ತರುವಲ್ಲಿ ಸಹಕರಿಸಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಸಲ್ಲಿಸಿದ್ಧಾರೆ.

Bommai
ಬೊಮ್ಮಾಯಿ

By

Published : Mar 20, 2022, 10:36 PM IST

ಬೆಂಗಳೂರು:ಉಕ್ರೇನ್‌ನಲ್ಲಿ ಶೆಲ್ ದಾಳಿಯ ವೇಳೆ ಮೃತಪಟ್ಟ ಹಾವೇರಿಯ ನವೀನ್ ಶೇಖರಪ್ಪ ಗ್ಯಾನಗೌಡರ್ ಪಾರ್ಥಿವ ಶರೀರವನ್ನು ಮರಳಿ ದೇಶಕ್ಕೆ ತರಲು ಶ್ರಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧನ್ಯವಾದ ಸಲ್ಲಿಸಿದ್ದಾರೆ.

ಈ ಬಗ್ಗೆ ಪತ್ರ ಬರೆದು ಕೃತಜ್ಞತೆ ಹೇಳಿರುವ ಸಿಎಂ ಬೊಮ್ಮಾಯಿ, ಉಕ್ರೇನ್​ನಲ್ಲಿ ಯುದ್ಧ ಪರಿಸ್ಥಿತಿಯ ಮಧ್ಯೆಯೂ ರಾಜ್ಯದ ಯುವಕನ ಮೃತದೇಹವನ್ನು ಮರಳಿ ತರುವಲ್ಲಿ ನಿಮ್ಮ ಶ್ರಮ ಅಗಣಿತ. ದೇಶದ, ರಾಜ್ಯದ ಜನರ ಬೇಡಿಕೆಗೆ ಅನುಗುಣವಾಗಿ ನವೀನ್​ ಮೃತದೇಹವನ್ನು ತಾಯ್ನಾಡಿಗೆ ತರಲಾಗುತ್ತಿದೆ. ಇದಕ್ಕೆ ಸಹಕರಿಸಿದ ನಿಮಗೆ ನವೀನ್​ ಕುಟುಂಬ ಮತ್ತು ರಾಜ್ಯದ ಜನರ ಪರವಾಗಿ ಧನ್ಯವಾದ ಸಲ್ಲಿಸುವೆ ಎಂದಿದ್ದಾರೆ.

ಇನ್ನು ನವೀನ್ ಪಾರ್ಥಿವ ಶರೀರ ನಾಳೆ ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರಲಿದ್ದು, ಅಲ್ಲಿಂದ ಆಂಬ್ಯುಲೆನ್ಸ್​ ಮೂಲಕ ಹಾವೇರಿಗೆ ಕೊಂಡೊಯ್ದು ಸಾರ್ವಜನಿಕ ದರ್ಶನ, ಮೆರವಣಿಗೆಯ ನಂತರ ಶವವನ್ನು ಮೆಡಿಕಲ್​ ಕಾಲೇಜಿಗೆ ದೇಹದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಓದಿ:ಭಾರತದ ವಿದೇಶಾಂಗ ನೀತಿಯನ್ನು ಹಾಡಿ ಹೊಗಳಿದ ಪಾಕ್​ ಪ್ರಧಾನಿ ಇಮ್ರಾನ್​ ಖಾನ್!​

For All Latest Updates

ABOUT THE AUTHOR

...view details