ಕರ್ನಾಟಕ

karnataka

ETV Bharat / city

ಮುಖ್ಯಮಂತ್ರಿ ಬೊಮ್ಮಾಯಿಗೆ ಕೋವಿಡ್: ದೆಹಲಿ ಪ್ರವಾಸ ರದ್ದು - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮತ್ತೊಮ್ಮೆ ಕೋವಿಡ್ ಸೋಂಕು

ಸಿಎಂ ಬೊಮ್ಮಾಯಿಗೆ ಕೋವಿಡ್ ದೃಢ. ಸಿಎಂ ದೆಹಲಿ ಪ್ರವಾಸ ರದ್ದಾಗಿದೆ.

ಮುಖ್ಯಮಂತ್ರಿ ಬೊಮ್ಮಾಯಿಗೆ ಕೋವಿಡ್
ಮುಖ್ಯಮಂತ್ರಿ ಬೊಮ್ಮಾಯಿಗೆ ಕೋವಿಡ್

By

Published : Aug 6, 2022, 9:55 AM IST

Updated : Aug 6, 2022, 12:29 PM IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮತ್ತೊಮ್ಮೆ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಸಿಎಂ ಅವರೇ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ನನಗೆ ಇಂದು ಕೋವಿಡ್-19 ಸೋಂಕು ದೃಢಪಟ್ಟಿದ್ದು, ಆರೋಗ್ಯವಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಿಎಂ ಮನವಿ ಮಾಡಿದ್ದಾರೆ.

ಸಿಎಂ ಬೊಮ್ಮಾಯಿ ಅವರಿಗೆ ಕೋವಿಡ್ ಸೋಂಕಿನ ಲಘು ಲಕ್ಷಣಗಳು ಇದ್ದು, ಸದ್ಯ ಆರ್.ಟಿ.ನಗರ ನಿವಾಸದಲ್ಲಿ ಐಸೋಲೇಷನಲ್ಲಿದ್ದಾರೆ. ಕೋವಿಡ್ ದೃಢಪಟ್ಟಿರುವ ಹಿನ್ನೆಲೆ ಸಿಎಂ ಬೊಮ್ಮಾಯಿ ತಮ್ಮ ದೆಹಲಿಯ ಪ್ರವಾಸ ರದ್ದುಗೊಳಿಸಿದ್ದಾರೆ.

ಸಿಎಂ ಇಂದು ಬೆಳಗ್ಗೆ 11.30ಕ್ಕೆ ದೆಹಲಿಗೆ ತೆರಳಬೇಕಿತ್ತು. ದೆಹಲಿಯಲ್ಲಿ ಸಂಜೆ ಪ್ರಧಾನಿ ನೇತೃತ್ವದಲ್ಲಿ ನಡೆಯಲಿರುವ ಆಜಾದಿ ಕಿ ಅಮೃತ ಮಹೋತ್ಸವದ ರಾಷ್ಟ್ರೀಯ ಸಮಿತಿ ಸಭೆ, ನಾಳೆ ನಡೆಯಲಿರುವ ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗಬೇಕಿತ್ತು. ಆದರೆ, ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಎರಡು ದಿನಗಳ ದೆಹಲಿ ಪ್ರವಾಸ ರದ್ದುಗೊಳಿಸಿದ್ದಾರೆ.

(ಓದಿ: ಇಂದು ಉಪರಾಷ್ಟ್ರಪತಿ ಚುನಾವಣೆಗೆ ಮತದಾನ.. ಕನ್ನಡತಿ ಮಾರ್ಗರೇಟ್​ ಆಳ್ವಗೆ ಸೋಲು ಖಚಿತವೇ?!)

ಸಿಎಂ ಆರೋಗ್ಯ ವಿಚಾರಣೆ: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಚಿವರಾದ ಡಾ. ಅಶ್ವತ್ ನಾರಾಯಣ್, ಹಾಲಪ್ಪ ಆಚಾರ್, ಪ್ರಭು ಚೌಹಾಣ್, ಬಿ.ಸಿ ನಾಗೇಶ್ ಅವರು ದೂರವಾಣಿ ಮೂಲಕ ಸಿಎಂ ಬೊಮ್ಮಾಯಿ ಅವರ ಆರೋಗ್ಯ ವಿಚಾರಿಸಿದರು.

Last Updated : Aug 6, 2022, 12:29 PM IST

ABOUT THE AUTHOR

...view details